ಹೊಸದಿಗಂತ ವರದಿ ಬಳ್ಳಾರಿ :
ನಗರದ ಅಹಂಬಾವಿ ರಸ್ತೆಯ ಸಚಿವ ಬಿ.ಶ್ರೀರಾಮುಲು ಅವರ ನಿವಾಸದ ಕಚೇರಿಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಎಂ.ಗೋನಾಳ್ ಸೇರಿದಂತೆ ನಾನಾ ಗ್ರಾಮಗಳ ಪ್ರಮುಖರು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ಕಾಂಗ್ರೆಸ್, ಜೆಡಿಎಸ್ ತೊರೆದು ಸೋಮವಾರ ಬಿಜೆಪಿ ಸೇರ್ಪಡೆಯಾದರು.
ಗ್ರಾಮೀಣ ಕ್ಷೇತ್ರದ ಎಂ.ಗೋನಾಳ್ ಗ್ರಾಮದ ವಿ.ಹೊನ್ನೂರಪ್ಪ, ಜಗಧೀಶ್, ಹುಲುಗಪ್ಪ, ಶಿವಶಂಕರ್, ಚಂದ್ರಣ್ಣ, ಬಸವರಾಜ್, ಶ್ರೀನಿವಾಸ್, ವೀರೇಶ್, ಮಹಾನಂದಿ, ಯಂಕಪ್ಪ, ರಾಮಚಂದ್ರ, ಗಾದಿಲಿಂಗನಗೌಡ, ಮಲ್ಲಿಕಾರ್ಜುನ, ಗಂದಾಧರ್, ರಾಮಾಂಜಿನಿ, ಸುಂಕಣ್ಣ, ರುದ್ರಪ್ಪ, ಗುರುಬಸವ, ರಾಜೇಶ್, ಗುಂಡಪ್ಪ, ಉದಯಕುಮಾರ್, ಗೋವಿಂದ, ತಿಮ್ಮಣ್ಣ ಸೇರಿದಂತೆ ಅನೇಕ ಜನ ಪ್ರಮುಖರು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಗ್ರಾಮೀಣ ಕ್ಷೇತ್ರದ ಪ್ರಭಾವಿ ಮುಖಂಡ ಓಬಳೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.