Saturday, April 1, 2023

Latest Posts

ಮೇಘಾಲಯ ವಿಧಾನಸಭಾ ಚುನಾವಣೆ: ಐವರು ಅಭ್ಯರ್ಥಿಗಳ 2ನೇ ಪಟ್ಟಿ ಘೋಷಿಸಿದ ಕಾಂಗ್ರೆಸ್

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬರುವ ಮೇಘಾಲಯ ವಿಧಾನಸಭಾ ಚುನಾವಣೆಗೆ ಐವರು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಶನಿವಾರ ರಾತ್ರಿ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಫೆಬ್ರವರಿ 27 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಮೇಘಾಲಯದ ಅರವತ್ತು ಸದಸ್ಯರ ವಿಧಾನಸಭೆಗೆ ಪಕ್ಷವು ಈ ಹಿಂದೆ 55 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಶನಿವಾರ ಘೋಷಿಸಲಾದ ಎಲ್ಲಾ ಐದು ಅಭ್ಯರ್ಥಿಗಳು ಹೊಸ ಮುಖಗಳಾಗಿದ್ದಾರೆ. ಖರ್ಕುಟ್ಟಾದಿಂದ ಅಭ್ಯರ್ಥಿ ಚಿರೆಂಗ್ ಪೀಟರ್ ಮರಕ್ ಅವರು ತುರಾ ಎನ್‌ಪಿಪಿ ಸಂಸದ ಅಗಾಥಾ ಸಂಗ್ಮಾ ಅವರ ಸೋದರ ಮಾವ. ಈ ತಿಂಗಳಷ್ಟೇ ಎನ್‌ಪಿಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

ಸುತ್ಂಗಾ ಸೈಪುಂಗ್ ಕ್ಷೇತ್ರದಿಂದ ಶಿಲ್ಲಾಂಗ್ ಸಂಸದ ವಿನ್ಸೆಂಟ್ ಪಾಲಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ, ತ್ರಿಪುರಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 17 ಅಭ್ಯರ್ಥಿಗಳನ್ನು ಶನಿವಾರ ಪ್ರಕಟಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!