Monday, March 27, 2023

Latest Posts

ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆಗೆ ಹೆಣ್ಣುಮಕ್ಕಳನ್ನು ನಿಷೇಧಿಸಿದ ತಾಲಿಬಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ತೀರ್ಪಿನಲ್ಲಿ, ತಾಲಿಬಾನ್ ಮುಂದಿನ ತಿಂಗಳು ನಡೆಯಲಿರುವ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ ಬರೆಯಲು ಹೆಣ್ಣುಮಕ್ಕಳನ್ನು ನಿಷೇಧಿಸಿದೆ ಎಂದು ಅಫ್ಘಾನ್ ಸುದ್ದಿ ಸಂಸ್ಥೆ TOLOnews ವರದಿ ಮಾಡಿದೆ.

ತಾಲಿಬಾನ್ ಉನ್ನತ ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾನಿಲಯಗಳಿಗೆ ನೋಟಿಸ್ ಕಳುಹಿಸಿದ್ದು, ಮುಂದಿನ ಸೂಚನೆ ಬರುವವರೆಗೂ ವಿದ್ಯಾರ್ಥಿನಿಯರು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಹೇಳಿದೆ. ಸ್ಪಷ್ಟವಾಗಿ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಗೆ ಹೆಣ್ಣುಮಕ್ಕಳನ್ನಿ ನೋಂದಾಯಿಸಿಕೊಳ್ಳುವುದನ್ನು ನಿಷೇಧಿಸಿದ್ದಾರೆ.

ಸರ್ಕಾರೇತರ ಸಂಸ್ಥೆಗಳಲ್ಲಿ ಮಹಿಳೆಯರು ಕೆಲಸ ಮಾಡುವುದನ್ನು ನಿಷೇಧಿಸುವ ಬೆನ್ನಲ್ಲೇ ಮತ್ತೊಂದು ನಿಷೇಧ ಹೇರಿದೆ. ತಾಲಿಬಾನ್‌ ನಿರ್ಧಾರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ ಎಂದು TOLOnews ವರದಿ ಮಾಡಿದೆ.
ಅಫ್ಘಾನ್ ಹುಡುಗಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣದ ಮೇಲೆ ಅನಿರ್ದಿಷ್ಟ ನಿಷೇಧವನ್ನು ತಾಲಿಬಾನ್ ಆದೇಶಿಸಿದ ನಂತರ, ಎಜುಕೇಶನ್ ಕ್ಯಾನಾಟ್ ವೇಟ್ (ECW), ವಿಶ್ವಸಂಸ್ಥೆಯು ಜಾಗತಿಕ ಮತ್ತು ತುರ್ತು ಸಂದರ್ಭಗಳಲ್ಲಿ ಶಿಕ್ಷಣಕ್ಕಾಗಿ ಶತಕೋಟಿ ಡಾಲರ್ ನಿಧಿ ಮತ್ತು ದೀರ್ಘಕಾಲದ ಬಿಕ್ಕಟ್ಟುಗಳು ಸೇರಿದಂತೆ ಹಲವಾರು ಮಾನವೀಯ ಸಂಸ್ಥೆಗಳು ತಡೆ ನೀಡಿವೆ. ಆಫ್ಘನ್ ಮಹಿಳೆಯರ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಹಿಂಪಡೆಯಿರಿ ಎಂದು ತಾಕೀತು ಮಾಡಿದೆ.

ಇದಕ್ಕೂ ಮುನ್ನ, ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಶನ್ ಈ ತಿಂಗಳ ಆರಂಭದಲ್ಲಿ ಸಭೆ ನಡೆಸಿದ್ದು, ಅಫ್ಘಾನ್ ಉಸ್ತುವಾರಿ ಸರ್ಕಾರದ ನಿರ್ಧಾರವನ್ನು ಚರ್ಚಿಸಲು ಮಹಿಳೆಯರಿಗೆ ಶಿಕ್ಷಣ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಲು ಪ್ರವೇಶವನ್ನು ನಿರ್ಬಂಧಿಸಿದೆ. ಇವರ ಈ ನಿರ್ಧಾರಕ್ಕೆ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳು ಮತ್ತು ಸಂಸ್ಥೆಗಳು ಮಹಿಳೆಯರು ಮತ್ತು ಬಾಲಕಿಯರ ಕೆಲಸ ಮತ್ತು ಶಿಕ್ಷಣದ ಪ್ರವೇಶದ ತಡೆ ಇಸ್ಲಾಮಿಕ್ ಕಾನೂನಿನ ಉಲ್ಲಂಘನೆ ಎಂದು ವ್ಯಾಖ್ಯಾನಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!