Sunday, August 14, 2022

Latest Posts

ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದೆ – ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾರನಾಥದಲ್ಲಿರುವ ಅಶೋಕನ ಕಾಲದಲ್ಲಿರುವ ಲಾಂಛನವನ್ನೇ ಅನುಕರಿಸಲಾಗಿದೆ. ಆದರೆ ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನೂತನ ಸಂಸತ್ ಮುಂದಿರುವ ರಾಷ್ಟ್ರ ಲಾಂಛನದ ಬಗ್ಗೆ ವಿರೋಧ ಪಕ್ಷ ಎತ್ತಿರುವ ಚಕಾರಕ್ಕೆ ಟಾಂಗ್ ನೀಡಿದರು

ಅವರು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಲಾಂಛನ ಬಗ್ಗೆ ಈಗಾಗಲೇ ಸ್ಪಷ್ಟತೆ ಕೊಡಲಾಗಿದೆ. ಆ ಲಾಂಛನದಿಂದಲೇ ಸಿಂಹದ ಮುಖಚರ್ಯೆ ತೆಗೆದುಕೊಳ್ಳಲಾಗಿದೆ, ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ. ವ್ಯಾಗ್ರವಾಗಿದೆ ಉಗ್ರವಾಗಿದೆ ಎಂಬುವುದು ನಮ್ಮ ದೃಷ್ಟಿಕೋನ ಸೂಚಿಸುತ್ತದೆ.

ಸಾರನಾಥ ಮಾದರಿಯನ್ನು ಯಥಾವತ್ತು ಮಾಡಲಾಗಿದೆ, ಕಾಂಗ್ರೆಸ್ ನೋಡುವ ದೃಷ್ಟಿ ಬೇರೆ ನಾವು ನೋಡುವ ದೃಷ್ಟಿ ಬೇರೆಯದಾಗಿದೆ. ಕಾಂಗ್ರೆಸ್ ಇದರಲ್ಲಿ ರಾಜಕೀಯ ಹುಡುಕುತ್ತದೆ. ನಮ್ಮಲ್ಲಿ ಕ್ರಿಯಾಶೀಲವಾದ, ಆಕ್ಟಿವ್ ಪ್ರಧಾನಿ ಇದ್ದಾರೆ. ಸಿಂಹ ಹೇಗೆ ಸಶಕ್ತವಾಗಿ ಘರ್ಜನಾ ರೂಪದಲ್ಲಿರಬೇಕೋ ಅದು ನಮ್ಮ ಸಿಂಹ. ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದ್ದಾರೆ, ಕಾಂಗ್ರೆಸ್ನ ಸಂಸ್ಕೃತಿ ಹೇಗೋ ಈ ಸಿಂಹ ಹಾಗೆಯೇ ಕಾಣುತ್ತದೆ ಎಂದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss