ಇರಾನ್ ನಲ್ಲೂ ಹಿಜಾಬ್ ಸದ್ದು: ‘ಕಡ್ಡಾಯ’ ಕಾನೂನು ವಿರೋಧಿಸಿ ಪ್ರತಿಭಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರಾನ್ ನಲ್ಲಿ ಹಿಜಾಬ್ ವಿರುದ್ಧದ ಕೂಗು ಗಟ್ಟಿಗೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್‌ ಬಳಕೆ ತೆಗೆದುಹಾಕುವಂತೆ ಇರಾನ್‌ ಮಾನವ ಹಕ್ಕುಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

“ರಾಷ್ಟ್ರೀಯ ಹಿಜಾಬ್ ಮತ್ತು ಪರಿಶುದ್ಧತೆಯ ದಿನ” ದಂದು ಸಾರ್ವಜನಿಕವಾಗಿ ಮಹಿಳೆಯರು ತಮ್ಮನ್ನು ‘ಮುಸುಕು’ಗಳಿಂದ ಮುಕ್ತ ಮಾಡುವಂತೆ ಆಗ್ರಹಿಸಿದರು. 1979ರ  ನಂತರ ಇರಾನ್‌ನ ಇಸ್ಲಾಮಿಕ್ ಷರಿಯಾ ಕಾನೂನಿನ ಅಡಿಯಲ್ಲಿ, ಮಹಿಳೆಯರು ತಮ್ಮ ಕೂದಲು ಹಾಗೂ ಮುಖ ಕಾಣದಂತೆ ಉದ್ದವಾದ ಉಡುಪುಗಳನ್ನು ಧರಿಸಬೇಕು ಎಂಬ ನಿಯಮ ವಿಧಿಸಲಾಗಿದೆ. ಇದನ್ನು ಉಲ್ಲಂಘಿಸುವವರಿಗೆ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತಿದೆ.

ಇದೀಗ ರಾಷ್ಟ್ರೀಯ ಹಿಜಾಬ್ ಮತ್ತು ಪರಿಶುದ್ಧತೆಯ ದಿನವನ್ನು ದೇಶಾದ್ಯಂತ ಆಚರಣೆ ಮಾಡುವ ಸಂದರ್ಭದಲ್ಲಿ, ಮಾನವ ಹಕ್ಕುಗಳ ಕಾರ್ಯಕರ್ತರು ಈ ಕ್ರಮವನ್ನು ಟೀಕಿಸಿದ್ದಲ್ಲದೆ, ‘ಮುಸುಕು’ ತೆಗೆಯುವಂತೆ ಮಹಿಳೆಯರಿಗೆ ಕರೆ ನೀಡಿದ್ದಾರೆ.

ಈ ಆಚರಣೆ ಮಹಿಳೆಯರನ್ನು ಮತ್ತಷ್ಟು ಹೊಸಕಿಹಾಕಲು ನಡೆಸುತ್ತಿರುವ ಪ್ರಯತ್ನವಷ್ಟೇ, ಇದರ ಹಿಂದೆ ಮಹಿಳೆಯರನ್ನು ಉದ್ಧಾರ ಮಾಡುವ ಯಾವುದೇ ಯೋಜನೆಯಿಲ್ಲ ಎಂದು ಮಹಿಳಾ ಕಾರ್ಯಕರ್ತರು ಪ್ರತಿಭಟನೆ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ #No2Hijab ಎಂಬ ಹ್ಯಾಶ್‌ಟ್ಯಾಗ್ ಮೂಲಕ ಇರಾನಿಯನ್ನರು ದೇಶದ ಹೊರಗೆ ಮತ್ತು ಒಳಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಹಿಳೆಯರು ರಸ್ತೆಗಳಲ್ಲಿ ನಡೆಯುವಾಗ ತಮ್ಮ ಮುಸುಕನ್ನು ತೆಗೆದು ಜೊತೆಗೆ ನೈತಿಕ ಪೊಲೀಸರನ್ನು ವಿರೋಧಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.  ‘ನಾನು ಏನು ಧರಿಸಬೇಕೆಂದು ನಿರ್ಧರಿಸುವ ಹಕ್ಕು ನನಗಿದೆ. ನನ್ನ ಆಯ್ಕೆ ನನ್ನ ಇಚ್ಛೆ ಅದಕ್ಕೆ ನಾನೇಕೆ ಜೈಲಿನಲ್ಲಿರಬೇಕು #No2Hijab’ ಎಂದು ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ.

ಇರಾನ್ ಕಾನೂನಿನ ವಿರುದ್ಧ ಧ್ವನಿ ಎತ್ತಿರುವ ಕಾರ್ಯಕರ್ತರಿಗೆ ಈಗ ಬಂಧನದ ಭೀತಿ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!