ಓಟು ಪಡೆದು ಎಸ್ಸಿ, ಎಸ್ಟಿ ಸಮುದಾಯಕ್ಕೆ ದ್ರೋಹ ಬಗೆದ ಕಾಂಗ್ರೆಸ್: ಜೆ.ಪಿ.ನಡ್ಡಾ

ಹೊಸದಿಗಂತ ವರದಿ, ಬಳ್ಳಾರಿ:

ಸುಮಾರು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಎಸ್ಸಿ, ಎಸ್ಟಿ ವರ್ಗದವರನ್ನು ಓಟ್ ಬ್ಯಾಂಕ್ ನ್ನಾಗಿ ಮಾಡಿಕೊಂಡಿದ್ದು, ಅವರಿಂದ ಮತ ಪಡೆದ ಕೈ ನಾಯಕರು ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಜೆ.ಪಿ.ನಡ್ಡಾ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಟಿಬಿ.ಸ್ಯಾನಿಟೋರಿಯಂ ಆಸ್ಪತ್ರೆ, ಜಿ.ಸ್ಕ್ವಾಯರ್ ಆವರಣದಲ್ಲಿ ಶನಿವಾರ ಬಿಜೆಪಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.ನಾವು ಭಾಗ್ಯಶಾಲಿಗಳು, ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ, ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯವಕ್ತಿಗಳಿಗೂ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಕಾಂಗ್ರೆಸ್ ನವರು ಅವರಿಂದ ಮತ ಪಡೆದು ಅನ್ಯಾಯ ಮಾಡಿದೆ. ಬದಲಾವಣೆ ಕಾಲ ಬಂದಿದೆ, ನಿಮ್ಮೊಂದಿಗೆ ಮೋದಿಜೀ ಅವರ ತಾಕತ್ತಿನ ಸರ್ಕಾರವಿದ್ದು, ಧೈರ್ಯದಿಂದ ಮುನ್ನುಗ್ಗಿ ನಿಮ್ಮೋಂದಿಗೆ‌ ನಾವಿದ್ದೇವೆ, ಸರ್ಕಾರವಿದೆ. ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನು ದೇಶದ ಅತ್ಯುನ್ನತ ಸ್ಥಾನ ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ, 70 ವರ್ಷ ಕಳೆದರೂ ಕಾಂಗ್ರೆಸ್ ಮಾಡಲಿಲ್ಲ, ಅವರಿಗೆ ಹಿಂದುಳಿದವರ ಮತಗಳು‌ ಬೇಕು, ಅವರು ಮುಂದುವರೆಯುವುದು ಬೇಕಿಲ್ಲ, ದೇಶದಲ್ಲಿ 10ಕೋಟಿ ಜನರಿದ್ದು, ಕಾಂಗ್ರೆಸ್ ನವರು ಅವರಿಗೆ ಯಾವುದೇ ಸ್ಥಾನಮಾನಗಳನ್ನು ನೀಡಲು ಚಿಂತನೆ ಮಾಡಿಲ್ಲ, ಅದನ್ನು ನಮ್ಮ ಮೋದಿಜೀ ಸಾಧನೆ ಮಾಡಿದ್ದಾರೆ. ಜಾರ್ಖಂಡ್ ಮೂಲದ ಅರ್ಜುನ್ ಮುಂಡಾ ಅವರು ಎರಡು ಬಾರಿ ಸಿ.ಎಂ.ಆದರು, ಮತ್ತೆ ಅವರನ್ನು ಮೋದಿಜೀ ಕೇಂದ್ರದ ಮಂತ್ರಿಯನ್ನಾಗಿ‌ ಮಾಡಿದ್ದಾರೆ, ಆದಿವಾಸಿ ಜನರನ್ನು ಮುಖ್ಯವಾಹಿನಿ ತರಲು ಬಿಜೆಪಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆದಿವಾಸಿ ಜನರಿಗೆ ಕೇಂದ್ರ ಸರ್ಕಾರ 8 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಮೀಸಲಿಟ್ಟು, ಅನೇಕ ಯೋಜನೆಗಳನ್ನು ರೂಪಿಸಿದೆ. ಏಕಲವ್ಯ ವಿದ್ಯಾಲಯ, ಸೇರಿ ನಾನಾ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.

ಮೋದಿಜೀ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಆವಿಷ್ಮಾನ್ ಭಾರತ್ ಯೋಜನೆ ಸೇರಿದಂತೆ ಆದಿವಾಸಿ ಜನರಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಎಸ್ಟಿ ಅವರಿಗೆ 3 ರಿಂದ 7ರಷ್ಡು ಮೀಸಲಾತಿ, ಎಸ್ಸಿ ಅವರಿಗೆ 15 ರಿಂದ 17ರಷ್ಟು ಮೀಸಲಾತಿ ಹೆಚ್ಚಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ನಮ್ಮೊಂದಿಗೆ ಕೈಜೋಡಿಸಿ ನಿಮ್ಮೊಂದಿಗೆ ನಮ್ಮ ಸರ್ಕಾರವಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!