Tuesday, May 30, 2023

Latest Posts

ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ರಿಲೀಸ್, ತುಮಕೂರಿನಲ್ಲಿ ಯಾರಿಗೆ ಟಿಕೆಟ್?

ಹೊಸದಿಗಂತ ವರದಿ ತುಮಕೂರು:

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತುಮಕೂರು ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರದಗಳ ಪೈಕಿ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ನ್ನು ಘೋಷಿಸಿದೆ. ಟಿಕೆಟ್ ಗೊಂದಲವಿರುವ ತುಮಕೂರು ನಗರ ಸೇರಿ ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಎರಡನೇ ಪಟ್ಟಿಯಲ್ಲಿ ಬಿಡುಗಡೆ ಯಾಗುವ ನಿರೀಕ್ಷೆ ಯಿದೆ.

ಪಾವಗಡದ ಹಾಲಿ ಶಾಸಕ ವೆಂಕಟರವಣಪ್ಪ ಬದಲಾಗಿ ಅವರ ಪುತ್ರ ಎಚ್. ವಿ. ವೆಂಕಟೇಶ್ ಅವರಿಗೆ ಈ ಬಾರಿ ಟಿಕೆಟ್ ಕೊಡಲಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಕಳೆದ ಬಾರಿ ಅಭ್ಯರ್ಥಿ ಯಾದವರು, ಶಾಸಕರಾದ ವರಿಗೆ ಟಿಕೆಟ್ ಹಂಚಿಕೆ ಯಲ್ಲಿ ಮನ್ನಣೆ ನೀಡಲಾಗಿದೆ.

ಕ್ಷೇತ್ರ- ಟಿಕೆಟ್ ಪಡೆದ ಅಭ್ಯರ್ಥಿಗಳು
ಕೊರಟಗೆರೆ(ಎಸ್ಸಿ ಮೀಸಲು) -ಡಾ. ಜಿ ಪರಮೇಶ್ವರ್,
ಮಧುಗಿರಿ- ಕೆ. ಎನ್. ರಾಜಣ್ಣ, ಸಿರಾ-ಟಿ.ಬಿ.ಜಯಚಂದ್ರ, ತಿಪಟೂರು-ಷಡಾಕ್ಷರಿ, ಕುಣಿಗಲ್-ಡಾ.ಎಚ್.ಡಿ.ರಂಗನಾಥ್, ಚಿಕ್ಕ ನಾಯಕನಹಳ್ಳಿ-ಕೆ.ಎಸ್.ಕಿರಣ್ ಕುಮಾರ್, ತುರುವೇಕೆರೆ ಬೆಮೆಲ್ ಕಾಂತರಾಜ್, ಪಾವಗಡ ಎಸ್ ಸಿ ಮೀಸಲು-ಎಚ್.ವಿ.ವೆಂಕಟೇಶ್ ಅಭ್ಯರ್ಥಿಗಳಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!