Friday, June 9, 2023

Latest Posts

ರಾಹುಲ್‌ ಗಾಂಧಿಯಂತೆ ಜನಪ್ರತಿನಿಧಿತ್ವ ಕಳೆದುಕೊಂಡವರ ಪಟ್ಟಿ ಇಲ್ಲಿದೆ ನೋಡಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೋದಿ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರಿಯಾಗಿದ್ದು ಸುಪ್ರಿಂ ಕೋರ್ಟ್‌ ಆದೇಶದಂತೆ ಅವರು ತಮ್ಮ ಸಂಸದತ್ವ ಕಳೆದುಕೊಂಡಿದ್ದಾರೆ. 2013ರ ಸುಪ್ರಿಂ ಕೋರ್ಟ್ ಆದೇಶದಂತೆ ನ್ಯಾಯಾಲಯದಿಂದ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಶಿಕ್ಷೆಗೆ ಗುರಿಯಾದರೆ ಅಂಥಹ ಜನಪ್ರತಿನಿಧಿಗಳು ತಮ್ಮ ಜನಪ್ರತಿನಿಧಿತ್ವ ಕಳೆದುಕೊಳ್ಳುತ್ತಾರೆ.‌ ಇದರ ಅನ್ವಯ ಇದುವರೆಗೆ ದೇಶದಲ್ಲಿ ಹಲವರು ಈ ರೀತಿ ತಮ್ಮ ಅಧಿಕಾರ ಕಳೆದುಕೊಂಡಿದ್ದು ಆ ಸಾಲಿಗೆ ಕಾಂಗ್ರೆಸ್‌ ನ ನಾಯಕ ರಾಹುಲ್‌ ಗಾಂಧಿಇತ್ತೀಚಿನ ಸೇರ್ಪಡೆಯಷ್ಟೇ. ಹಾಗಿದ್ದರೆ ಈ ರೀತಿ ಅನರ್ಹರೆನಿಸಿಕೊಂಡವರು ಯಾರ್ಯಾರು? ಎಂಬುದಕ್ಕೆ ಉತ್ತರ ಕೆಳಗಿದೆ.

  • ಜೆ.ಜಯಲಲಿತಾ: ತಮಿಳುನಾಡು ರಾಜಕೀಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದ ಅಡಿಯಲ್ಲಿ 4 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರು. ಹೀಗಾಗಿ 2014ರಲ್ಲಿಅವರನ್ನು ತಮಿಳುನಾಡು ವಿಧಾನ ಸಭೆಯಿಂದ ಅನರ್ಹಗೊಳಿಸಲಾಯಿತು.
  • ಪಿಪಿ ಮೊಹಮ್ಮದ್ ಫೈಜಲ್: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಲಕ್ಷದ್ವೀಪ್ ಸಂಸದ ಪಿಪಿ ಮೊಹಮ್ಮದ್ ಫೈಸಲ್ 2023ರ ಜನವರಿಯಲ್ಲಿ ಅನರ್ಹಗೊಂಡಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ 10 ವರ್ಷಗಲ ಕಾಲ ಅವರು ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಹೀಗಾಗಿ ಅವರು ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ.
  • ಆಜಂ ಖಾನ್: ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ 2019 ರ ದ್ವೇಷ ಭಾಷಣ ಪ್ರಕರಣದಲ್ಲಿ ನ್ಯಾಯಾಲಯದಿಂದ 3 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರು. ಅಕ್ಟೋಬರ್ 2022 ರಲ್ಲಿ ಉತ್ತರ ಪ್ರದೇಶ ವಿಧಾನಸಭೆಯಿಂದ ಅವರನ್ನು ಅಮಾನತುಗೊಳಿಸಲಾಯಿತು.
  • ಕುಲದೀಪ್ ಸಿಂಗ್ ಸೆಂಗಾರ್: ಬಹುಚರ್ಚಿತ ಉನ್ನಾವೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಬಂಗಾರ್‌ಮೌ ಕ್ಷೇತ್ರದ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರು. ಹೀಗಾಗಿ 2020ರಲ್ಲಿ ವಿಧಾಸಭಾ ಸದಸ್ಯತ್ವದಿಂದ ಅವರು ಅನರ್ಹಗೊಂಡರು.
  • ಅನಿಲ್ ಕುಮಾರ್ ಸಾಹ್ನಿ: ವಂಚನೆ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಕಾರಣ ಆರ್‌ಜೆಡಿ ಶಾಸಕ ಅನಿಲ್ ಕುಮಾರ್ ಸಾಹ್ನಿ ಅವರನ್ನು ಅಕ್ಟೋಬರ್ 2022 ರಲ್ಲಿ ಬಿಹಾರ ವಿಧಾನಸಭೆಯಿಂದ ಅನರ್ಹಗೊಳಿಸಲಾಯಿತು.
  • ವಿಕ್ರಮ್ ಸಿಂಗ್ ಸೈನಿ: ಮುಜಾಫರ್‌ ನಗರದ ಬಿಜೆಪಿ ಶಾಸಕರಾಗಿದ್ದ ವಿಕ್ರಮ್ ಸಿಂಗ್ ಸೈನಿ 2022ರ ಅಕ್ಟೋಬರ್‌ನಲ್ಲಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು. 2013 ರ ಮುಜಫರ್‌ನಗರ ಗಲಭೆ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು ಇದಕ್ಕೆ ಕಾರಣವಾಗಿತ್ತು
  • ಪ್ರದೀಪ್ ಚೌಧರಿ: ಹಲ್ಲೆ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರಿಂದ ಕಾಂಗ್ರೆಸ್ ಶಾಸಕ ಪ್ರದೀಪ್ ಚೌಧರಿ ಜನವರಿ 2021 ರಲ್ಲಿ ಹರಿಯಾಣ ವಿಧಾನಸಭೆಯಿಂದ ಅನರ್ಹಗೊಂಡರು.
  • ಅಬ್ದುಲ್ಲಾ ಅಜಂ ಖಾನ್: ಸಮಾಜವಾದಿ ಪಕ್ಷದ ಶಾಸಕ ಅಬ್ದುಲ್ಲಾ ಅಜಂ ಖಾನ್ ಇತ್ತೀಚೆಗೆ ಅಂದರೆ ಫೆಬ್ರವರಿ 2023 ರಲ್ಲಿ ಉತ್ತರ ಪ್ರದೇಶ ವಿಧಾನಸಭೆಯಿಂದ ಅನರ್ಹಗೊಂಡಿದ್ದಾರೆ. 15 ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಜೈಲು ಶಿಕ್ಷೆಗೆ ಅವರು ಗುರಿಯಾಗಿದ್ದರು.
  • ಅನಂತ್ ಸಿಂಗ್: ಆರ್‌ಜೆಡಿ ಶಾಸಕ ಅನಂತ್ ಸಿಂಗ್ ಅವರನ್ನು ಜುಲೈ 2022 ರಲ್ಲಿ ಬಿಹಾರ ಅಸೆಂಬ್ಲಿಯಿಂದ ಅನರ್ಹಗೊಳಿಸಲಾಯಿತು, ಅವರ ನಿವಾಸದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಅವರು ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!