ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲದ ಅಧಿವೇಶನದ ಮೂರನೇ ದಿನಕ್ಕೆ ಉಭಯ ಸದನಗಳು ಇಂದು ಸಭೆ ಸೇರಲಿದ್ದು, ಸಂಸತ್ತಿನಲ್ಲಿ ಅದಾನಿ ದೋಷಾರೋಪಣೆ ಕುರಿತು ಚರ್ಚೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಕಾಂಗ್ರೆಸ್ ಸಂಸದರಾದ ಮಾಣಿಕ್ಕಂ ಠಾಗೋರ್, ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಮನೀಶ್ ತಿವಾರಿ ಅವರು ಇಂದು ಅಧಿವೇಶನ ಪ್ರಾರಂಭವಾಗುವ ಮೊದಲು ಈ ಸಂಬಂಧ ಮುಂದೂಡಿಕೆ ನೋಟಿಸ್‌ಗಳನ್ನು ಮಂಡಿಸಿದರು.
“ಸೌರ ವಿದ್ಯುತ್ ಡೀಲ್‌ಗಳು ಮತ್ತು ಸೆಕ್ಯುರಿಟೀಸ್ ವಂಚನೆಗಾಗಿ $265 ಮಿಲಿಯನ್‌ಗೂ ಹೆಚ್ಚು ಲಂಚವನ್ನು ಒಳಗೊಂಡಿರುವ ಗೌತಮ್ ಅದಾನಿಯವರ ಇತ್ತೀಚಿನ US ದೋಷಾರೋಪಣೆಯು ಅದಾನಿ ಗ್ರೂಪ್‌ನ ಮೇಲೆ ಕರಾಳ ಛಾಯೆಯನ್ನು ಬೀರಿದೆ. ಈ ವಿಷಯದಲ್ಲಿ ಮೋದಿ ಸರ್ಕಾರದ ಮೌನವು ಭಾರತದ ಸಮಗ್ರತೆ ಮತ್ತು ಜಾಗತಿಕ ಸ್ಥಾನಮಾನದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಅದಾನಿ ಜೊತೆಗಿನ ಸ್ನೇಹಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಬೇಕು,’’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಅದಾನಿ ಜಗನ್ ಮೋಹನ್ ರೆಡ್ಡಿ ಸರ್ಕಾರಕ್ಕೆ 21,750 ಕೋಟಿ ಲಂಚ ನೀಡಿದ್ದಾರೆ ಎಂದು ಆರೋಪಿಸಿ ಆಂಧ್ರಪ್ರದೇಶ ಸರ್ಕಾರ SECI ಜೊತೆಗಿನ ಸೌರ ವಿದ್ಯುತ್ ಒಪ್ಪಂದವನ್ನು ರದ್ದುಪಡಿಸಲು ಯೋಚಿಸುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಆರೋಪಗಳ ಬಗ್ಗೆ ತಕ್ಷಣವೇ ಚರ್ಚೆ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಲಾಗಿದೆ.