ಡೈನೋಸಾರ್‌ಗಳಂತೆ ಕಾಂಗ್ರೆಸ್‌ ನಿರ್ನಾಮ: ರಾಜನಾಥ್‌ ಸಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನು ಕೆಲವೇ ವರ್ಷಗಳಲ್ಲಿ ಡೈನೋಸಾರ್‌ಗಳಂತೆ ಕಾಂಗ್ರೆಸ್‌ ಪಕ್ಷವು ನಿರ್ನಾಮವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಉತ್ತರಾಖಂಡ್‌ನ ಗೌಚಾರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್‌ ಬಲೂನಿ ಅವರ ಪರವಾಗಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಒಬ್ಬರಾದ ಮೇಲೆ ಒಬ್ಬರು ಕಾಂಗ್ರೆಸ್‌ ನಾಯಕರು ಪಕ್ಷವನ್ನು ತೊರೆಯುತ್ತಿದ್ದಾರೆ.ಇದು ಹೀಗೆ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಡೈನೋಸಾರ್‌ನಂತೆ ಕಾಂಗ್ರೆಸ್‌ ನಶಿಸಿಹೋಗುತ್ತದೆ. ಮುಂದಿನ ವರ್ಷಗಳಲ್ಲಿ ಮಕ್ಕಳು ಕಾಂಗ್ರೆಸ್‌ ನಾಯಕರ ಹೆಸರು ಕೇಳಿದರೆ ಯಾರು ಎಂದು ಕೇಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!