ಕಾಂಗ್ರೆಸ್‌ ವೋಟರ್ಸ್‌ಗೆ ಹತ್ತು ಸಾವಿರ ರೂಪಾಯಿ ಕಾರ್ಡ್‌ ನೀಡಿದೆ: ನಿಖಿಲ್‌ ಕುಮಾರಸ್ವಾಮಿ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್‌ ವೋಟರ್ಸ್‌ಗೆ ಹತ್ತು ಸಾವಿರ ರೂಪಾಯಿ ನೀಡಿದೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕಾಂಗ್ರೆಸ್‌ಗೆ ಇದೇನು ಹೊಸತಲ್ಲ, ವಿಧಾನಸಭೆ ಚುನಾವಣೆ ನಡೆದಾಗ ಕಾಂಗ್ರೆಸ್‌ ಮಧ್ಯರಾತ್ರಿ ಐದು ಸಾವಿರ ಕೂಪನ್‌ ಕಾರ್ಡ್‌ ಹಂಚಿದ್ದರು. ಇದೀಗ ಮತ್ತೆ ಅದನ್ನೇ ಮುಂದುವರಿಸಿದ್ದಾರೆ.

ಹತ್ತು ಸಾವಿರ ರೂಪಾಯಿ ನೀಡಿ ವೋಟ್‌ ಖರೀದಿ ಮಾಡಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಮಾತನ್ನೇ ಆಡುತ್ತಿದ್ದರು. ನಮ್ಮ ಪಕ್ಷದ ಕಾರ್ಯಕರ್ತರು ಕಾರ್ಡ್‌ನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ ಆದರೂ ಪ್ರಯೋಜನ ಆಗಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!