ದಿಗಂತ ವರದಿ ವಿಜಯಪುರ:
ಮೀಸಲಾತಿ ದಲಿತರ ಜನ್ಮ ಸಿದ್ಧ ಹಕ್ಕು, ಕಾಂಗ್ರೆಸ್ ಮೊದಲಿನಿಂದಲೂ ದಲಿತರ ಶೋಷಣೆ ಮಾಡುತ್ತ ಬಂದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದರು.
ರಾಹುಲ್ ಗಾಂಧಿ ಅವರು ಮೊನ್ನೆ ಅಮೆರಿಕಾಕೆ ಹೋಗಿದ್ದ ವೇಳೆ ಮೀಸಲಾತಿ ಕುರಿತಾದ ಹೇಳಿಕೆಯ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರ ಎದುರು ಆಕ್ರೋಶ ವ್ಯಕ್ತಪಡಿಸಿದ ಅವರು, ಮೀಸಲಾತಿ ದಲಿತರ ಹಕ್ಕು, ಅದನ್ನು ಯಾರೂ ಕಸಿದುಕೊಳ್ಳಲು ಬಿಡುವುದಿಲ್ಲ. ದಲಿತರನ್ನು ಕಾಂಗ್ರೆಸ್ ಮತಬ್ಯಾಂಕ್ ಆಗಿ ರೂಪಿಸಿಕೊಂಡಿದೆ ಎಂದರು.
ದಲಿತರ ಶ್ರೇಯೋಭಿದ್ಧಿಗಾಗಿ ಜಮೀನು, ನೀರಾವರಿ ಮಾಡಿಕೊಡುವ ಕೆಲಸ ಕಾಂಗ್ರೆಸ್ ಮಾಡಿಲ್ಲ. ಕೇವಲ ಕಣ್ಣೊರಿಸುವ ಕೆಲಸ ಮಾಡಿದ್ದಾರೆ ಎಂದರು.
ನಾನು ಸಮಾಜಕಲ್ಯಾಣ ಮಂತ್ರಿ ಇದ್ದಾಗ ಹೋರಾಟ ಮಾಡಿ ಜಮೀನು, ನೀರಾವರಿ, ಕಾನೂನು ತಂದು ಕೊಡುವ ಕೆಲಸ ಮಾಡಿದ್ದೇನೆ. ದಲಿತ ವಿದ್ಯಾರ್ಥಿಗಳಿಗೆ ಮೋರಾರ್ಜಿ ವಸತಿ ಶಾಲೆಗಳನ್ನು ಇಡಿ ರಾಜ್ಯದಲ್ಲಿ ಮಾಡಿದ್ದೇನೆ ಎಂದರು.