ಹೊಸದಿಗಂತ ಡಿಜಿಟಲ್ ಡೆಸ್ಕ್:
ಈದ್‌ಮಿಲಾದ್ ಹಬ್ಬದಂದು ನೃಪತುಂಗ ರಸ್ತೆಯಲ್ಲಿನ ವಾಯ್.ಎಮ್.ಸಿ.ಎ ಮೈದಾನಕ್ಕೆ ಸಾವಿರಾರು ಜನರು ಅಲಂಕೃತ ವಾಹನ ಹಾಗೂ ಮೆರವಣಿಗೆ ಮೂಲಕ ನಗರದ ವಿವಿಧ ಸ್ಥಳಗಳಿಂದ ಬಂದು ಸೇರಲಿದ್ದಾರೆ.
ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.
- ಜಿ.ಸಿ ನಗರ ದರ್ಗಾದಿಂದ ಹೊರಟು ಶಿವಾಜಿನಗರ ಕಂಟೋನ್ ಮೆಂಟ್ ಕಡೆಗೆ ಸಾಗುವುದು.
- ಯಲಹಂಕ ಓಲ್ಡ್ ಟೌನ್ ಮಸೀದಿಯಿಂದ ಯಲಹಂಕ ಓಲ್ಡ್ ಟೌನ್ ಮಸೀದಿಯವರೆಗೆ
- ಹಳೇ ಬಸ್ ನಿಲ್ದಾಣದಿಂದ ಸಣ್ಣ ಅಮಾನಿಕೆರೆಯವರೆಗೆ
- ಬೆಳ್ಳಳ್ಳಿ ಕ್ರಾಸ್ ನಿಂದ ನಾಗವಾರ ಸಿಗ್ನಲ್ವರೆಗೆ
- ರಾಜಗೋಪಾಲನಗರ ಮುಖ್ಯರಸ್ತೆಯಿಂದ ಪೀಣ್ಯ 2ನೇ ಹಂತದವರೆಗೆ
- ಸೌತ್ ಎಂಡ್ ಸರ್ಕಲ್ ನಿಂದ ಆರ್.ವಿ ರಸ್ತೆಯಲ್ಲಿ ಲಾಲ್ ಭಾಗ್ ವೆಸ್ಟ್ ಗೇಟ್ ಸರ್ಕಲ್ವರೆಗೆ
- ಗೀತಾ ಜಂಕ್ಷನ್ (ಕೂಲ್ ಚಾಯಿಂಟ್ ಜಂಕ್ಷನ್)ನಿಂದ ಸೌತ್ಎಂಡ್ ಸರ್ಕಲ್
- ಬೇಂದ್ರೆ ಜಂಕ್ಷನ್ ನಿಂದ ಓಬಳಪ್ಪ ಗಾರ್ಡನ್ ಜಂಕ್ಷನ್
- ಮಹಾಲಿಂಗೇಶ್ವರ ಬಡಾವಣೆ ನಿಂದ ಆಡುಗೋಡಿ