ಕಾಂಗ್ರೆಸ್‌ ಗೆ ಪರೀಕ್ಷೆ ಅಕ್ರಮದ ಕುರಿತು ಮಾತನಾಡುವ ನೈತಿಕತೆಯಿಲ್ಲ: ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ ಶಿವಮೊಗ್ಗ :
ಸ್ವಯಂ ಘೋಷಿತ ಸಿದ್ದರಾಮೋತ್ಸವ್ಕಕೆ ಆ ಪಕ್ಷದಲ್ಲಿಯೇ ವಿರೋಧವಿದ್ದು, ಈ ಉತ್ಸವಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇದು ಕಾಂಗ್ರೆಸ್‌ನಲ್ಲಿನ ಒಗ್ಗಟ್ಟು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಬುಧವಾರ ತುಂಗಾ ನದಿಗೆ ಬಾಗಿನ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪ ಆರುವ ಮುನ್ನ ಪ್ರಕಾಶವಾಗಿ ಉರಿಯುತ್ತದೆ. ಅದೇ ರೀತಿ ಕಾಂಗ್ರೆಸ್ ನೆಲಕಚ್ಚುವ ಹಂತಕ್ಕೆ ಬಂದಿದ್ದು, ಈಗ ಸಿದ್ದರಾಮೋತ್ಸವ ಮಾಡಲಾಗುತ್ತಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಾಯ್ಯ ತಾವು ಸಿಎಂ ಆಗೋಲ್ಲ ಎಂದು ಹೇಳುತ್ತಲೇ ಬೆಂಬಲಿಗರನ್ನು ಬಿಟ್ಟು ತಾವೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಡಿ.ಕೆ. ಶಿವಕುಮಾರ್ ಕೂಡ ಇದೇ ರೀತಿ ವರ್ತಿಸುತ್ತಿದ್ದಾರೆ ಎಂದ ಅವರು, ಜನ್ಮ ದಿನಾಚರಣೆಯನ್ನು ಒಂದು ಕುಟುಂಬದ ಎಲ್ಲರೂ ಸೇರಿ ಮಾಡಬೇಕು. ಆದರೆ ಈ ಕಾಂಗ್ರೆಸ್‌ನಲ್ಲಿ ಯಾರಿಗೂ ಹೊಂದಾಣಿಕೆಯೇ ಇಲ್ಲ ಎಂದರು.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಆಗಿರುವ ಅಕ್ರಮ ಸಂಬಂಧ ನಮ್ಮ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಎಷ್ಟೋ ಪರೀಕ್ಷೆಗಳ ಪ್ರಶ್ನೆಗಳು ಬಹಿರಂಗವಾಗಿದ್ದರೂ ಕೂಡ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಿರಲಿಲ್ಲ. ಈಗ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೂ ಕೂಡ ಮುಚ್ಚಿ ಹಾಕುತಿತ್ತು. ಹೀಗಾಗಿ ಕಾಂಗ್ರೆಸ್‌ನವರಿಗೆ ಪರೀಕ್ಷೆ ಅಕ್ರಮದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!