October 13, 2026
Tuesday, October 13, 2026
spot_img

‘ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ 41 ವರ್ಷಗಳಿಂದ ಗೆಲುವೇ ಸಿಕ್ಕಿಲ್ಲ’: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (BJP) ದೈತ್ಯ ಜಯಭೇರಿ ಬಾರಿಸಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ನಾನು ಈ ವಿಷಯವನ್ನು ವಿಶೇಷವಾಗಿ ರಾಹುಲ್ ಗಾಂಧಿ ಅವರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ ಎಂದ ಅಮಿತ್‌ ಶಾ, ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕಳೆದ 41 ವರ್ಷಗಳಿಂದ ಒಂದೇ ಒಂದು ಚುನಾವಣೆಯನ್ನೂ ಗೆದ್ದಿಲ್ಲ. 1985 ರಲ್ಲಿ ಅವರು ಗೆದ್ದಿದ್ದೇ ಕೊನೆಯ ಚುನಾವಣೆ, ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಇಲ್ಲಿ ಸತತ ಸೋಲನ್ನು ಅನುಭವಿಸುತ್ತಲೇ ಬಂದಿದೆ ಎಂದು ಇತಿಹಾಸದ ಪುಟಗಳನ್ನು ಬಿಚ್ಚಿಟ್ಟಿದ್ದಾರೆ.

104 ಸ್ಥಾನಗಳ ಪೈಕಿ 90 ರಲ್ಲಿ ಕಮಲ ಸಾರಥ್ಯ

ಗುಜರಾತ್‌ನ ಮೂರು ಪ್ರಮುಖ ಪುರಸಭೆಗಳು ಹಾಗೂ ಮಹಾನಗರ ಪಾಲಿಕೆಗಳಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಬೃಹತ್ ವಿಜಯ ದಾಖಲಿಸಿದೆ. ಒಟ್ಟು 104 ಸ್ಥಾನಗಳ ಪೈಕಿ ಬರೋಬ್ಬರಿ 90 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಅಧಿಪತ್ಯವನ್ನು ಸಾಬೀತುಪಡಿಸಿದೆ. ಈ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಗುಜರಾತ್ ಜನತೆ ಇಟ್ಟಿರುವ ಅಚಲವಾದ ನಂಬಿಕೆಗೆ ಹಿಡಿದ ಕನ್ನಡಿಯಾಗಿದೆ. ಇದೇ ವೇಳೆ ಎಲ್ಲಾ 32 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ ಒಂದೂ ಸ್ಥಾನ ಗೆಲ್ಲಲಾಗದೆ ಎಲ್ಲಾ ಕಡೆಗಳಲ್ಲೂ ಠೇವಣಿ ಕಳೆದುಕೊಂಡು ಭಾರಿ ಮುಖಭಂಗ ಅನುಭವಿಸಿದೆ ಎಂದು ತಿಳಿಸಿದ್ದಾರೆ.

ಗಾಂಧಿನಗರದಲ್ಲಿ ಶೇಕಡಾ 10 ರಷ್ಟು ಮತ ಹಂಚಿಕೆ ಹೆಚ್ಚಳ

ತಮ್ಮದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗಾಂಧಿನಗರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಅಭೂತಪೂರ್ವ ಪ್ರದರ್ಶನವನ್ನು ಶ್ಲಾಘಿಸಿದ ಗೃಹ ಸಚಿವರು, ನನ್ನದೇ ಸಂಸದೀಯ ಕ್ಷೇತ್ರವಾಗಿರುವ ಗಾಂಧಿನಗರ ಮಹಾನಗರ ಪಾಲಿಕೆಯ ಒಟ್ಟು 44 ಸ್ಥಾನಗಳ ಪೈಕಿ ಬಿಜೆಪಿ 38 ಸ್ಥಾನಗಳಲ್ಲಿ ಭರ್ಜರಿ ಜಯ ದಾಖಲಿಸಿದೆ. ಅಷ್ಟೇ ಅಲ್ಲದೆ, ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ಗಾಂಧಿನಗರದಲ್ಲಿ ಬಿಜೆಪಿಯ ಒಟ್ಟು ಮತಗಳ ಹಂಚಿಕೆಯು ಶೇಕಡಾ 10 ರಷ್ಟು ಭಾರಿ ಏರಿಕೆ ಕಂಡಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:

2029 ರಲ್ಲೂ ರಾಹುಲ್‌ಗೆ ಸೋಲು ಖಚಿತ

ವಿರೋಧ ಪಕ್ಷಗಳು ಎಷ್ಟೇ ಪ್ರಯತ್ನ ನಡೆಸಿದರೂ ಗುಜರಾತ್‌ನ ಮತದಾರರು ನರೇಂದ್ರ ಮೋದಿ ಅವರ ಬೆನ್ನಿಗೆ ಬಂಡೆಯಂತೆ ಗಟ್ಟಿಯಾಗಿ ನಿಂತಿದ್ದಾರೆ ಎಂಬುದನ್ನು ಈ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು. ಚುನಾವಣಾ ಆಯೋಗ ಮತ್ತು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ದೇಶದ ಜನರ ನಾಡಿಮಿಡಿತವನ್ನು ಅರಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದು, ಮುಂಬರುವ 2029 ರ ಲೋಕಸಭಾ

Must Read