ಲೋಕಸಭೆ ಚುನಾವಣೆಯ ಕಾವಿನ ಮಧ್ಯೆಯೂ ಕಾಂಗ್ರೆಸ್​ ಹೈಕಮಾಂಡ್ ಪ್ರೊಟೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆದಾಯ ತೆರಿಗೆ ಇಲಾಖೆಯಿಂದ ರಾಷ್ಟ್ರೀಯ ಕಾಂಗ್ರೆಸ್​​ಗೆ ನೋಟಿಸ್ ನೀಡಿರುವ ಹಿನ್ನೆಲೆ, ಇಂದಿನಿಂದ ದೇಶಾದ್ಯಂತ ಕಾಂಗ್ರೆಸ್ ಹೈಕಮಾಂಡ್ ಪ್ರತಿಭಟನೆಗೆ ಕರೆ ನೀಡಿದ್ದು, ಎಲ್ಲಾ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಾಯಕರು ಯೋಜನೆ ರೂಪಿಸಿದ್ದಾರೆ. ಮೊದಲ ಹಂತದ ಮತದಾನಕ್ಕೆ ಕೇವಲ ಮೂರು ವಾರಗಳು ಮಾತ್ರ ಬಾಕಿ ಉಳಿದಿವೆ ಈಗಿರುವಾಗ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ಗೆ ನೋಟೀಸ್ ನೀಡಿದೆ.

ಈ ಸೂಚನೆಯು ಒಟ್ಟು ಐದು ವರ್ಷಗಳ ಆದಾಯ ತೆರಿಗೆಯನ್ನು ಒಳಗೊಂಡಿದೆ. 1994-95 ಮತ್ತು 2017-18 ರಿಂದ 2020-21 ರವರೆಗಿನ ಆದಾಯ ತೆರಿಗೆ ದಾಖಲೆಗಳಿವೆ. ಅಧಿಸೂಚನೆ ಪ್ರಕಾರ ಒಟ್ಟು 1,823 ಕೋಟಿ ರೂ. ಉಳಿತಾಯವಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!