CINE | ಹಾರ್ದಿಕ್‌ ಟ್ರೋಲರ್ಸ್‌ ವಿರುದ್ಧ ಸೋನು ಸೂದ್‌ ಗರಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಂಬೈ ಇಂಡಿಯನ್ಸ್‌ ಹೊಸ ಕ್ಯಾಪ್ಟನ್‌ ಆಗಿ ಹಾರ್ದಿಕ್‌ ಪಾಂಡ್ಯ ಅವರನ್ನು ನೇಮಿಸಲಾಗಿದೆ. ಇದಾದ ನಂತರದಿಂದ ರೋಹಿತ್‌ ಶರ್ಮಾ ಫ್ಯಾನ್ಸ್‌ ಹಾರ್ದಿಕ್‌ ವಿರುದ್ಧ ತಿರುಗಿಬಿದ್ದಿದ್ದಾರೆ.

ಹಾರ್ದಿಕ್‌ ನೇತೃತ್ವದಲ್ಲಿ ಮುಂಬೈ ಮೊದಲೆರಡು ಪಂದ್ಯದಲ್ಲಿ ಸೋಲು ಕಂಡಿದ್ದು, ಇದಕ್ಕೆ ಹಾರ್ದಿಕ್‌ ಬ್ಯಾಡ್‌ಲಕ್‌ ಕಾರಣ ಎಂದು ಟ್ರೋಲ್‌ ಮಾಡಲಾಗುತ್ತಿದೆ.

ಹಾರ್ದಿಕ್‌ ಔಟ್‌ ಆಗಿ ಪೆವಿಲಿಯನ್‌ ಕಡೆ ತೆರಳಿದಾಗಲೂ ರೋಹಿತ್‌ ಅಭಿಮಾನಿಗಳು ರೋಹಿತ್‌ ಎಂದು ಕೂಗಿದ್ದಾರೆ. ಈ ಬಗ್ಗೆ ಸೋನು ಸೂದ್‌ ಹಾರ್ದಿಕ್‌ ಹೆಸರನ್ನು ಹೇಳದೇ ಟ್ವೀಟ್‌ ಮಾಡಿ ಪರವಹಿಸಿದ್ದಾರೆ.

ನಮ್ಮ ಆಟಗಾರರನ್ನು ನಾವು ಗೌರವಿಸಬೇಕು, ಇವರು ನಮ್ಮನ್ನು ಹೆಮ್ಮೆಯಿಂದ ತಲೆ ಎತ್ತುವಂತೆ ಮಾಡಿದ್ದಾರೆ. ಒಂದು ದಿನ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತೀರಿ, ಇನ್ನೊಂದು ದಿನ ತೆಗಳುತ್ತೀರಿ. ಅವರೇನು ಸೋತಿಲ್ಲವಲ್ಲಾ? ನಾವು ಸೋಲ್ತಿದ್ದೇವೆ. ನನಗೆ ಕ್ರಿಕೆಟ್‌ ಇಷ್ಟ. ನಮ್ಮ ದೇಶವನ್ನು ಪ್ರತಿನಿಧಿಸುವ ಎಲ್ಲ ಕ್ರಿಕೆಟಿಗರನ್ನು ಪ್ರೀತಿಸುತ್ತೀನಿ, ಯಾವ ಫ್ರಾಂಚೈಸಿಗಾದ್ರೂ ಆಡಲಿ ಡಸಂಟ್‌ ಮ್ಯಾಟರ್‌, ಟೀಂನ ಕ್ಯಾಪ್ಟನ್‌ ಆದ್ರೂ ಆಗಿರ್ಲಿ ಟೀಂನ ೧೫ನೇ ಪ್ಲೇಯರ್‌ ಆಗಿರ್ಲಿ ಎಲ್ಲರಿಗೂ ಗೌರವ ನೀಡ್ತೇನೆ ಅವರೇ ನಮ್ಮ ಹೀರೋಗಳು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!