Friday, October 7, 2022

Latest Posts

ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಿಂದಿರುವುದು ಕಾಂಗ್ರೆಸ್: ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದೇಶಕ್ಕೆ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲವನ್ನೂ ತಂದು ಕೊಟ್ಟಿರುವುದು ಕಾಂಗ್ರೆಸ್ ಎಂದು ಡಿ.ಕೆ‌. ಶಿವಕುಮಾರ್ ಹೇಳಿದ್ದಾರೆ.

ತ್ರಿವರ್ಣ ಧ್ವಜದ ಪಾದಯಾತ್ರೆಯನ್ನು ಕಾಂಗ್ರೆಸ್ ಅಧಿಕಾರದ ಆಸೆಗೆ ಮಾಡುತ್ತಿದೆ ಎಂಬ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು,
ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲದಿರುತ್ತಿದ್ದರೆ ಕುಮಾರಸ್ವಾಮಿ, ಯಡಿಯೂರಪ್ಪ, ನರೇಂದ್ರ ಮೋದಿ ಯಾರೂ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಅವರು ಅರಿತುಕೊಳ್ಳಲಿ ಎಂದರು.

ಗಾಂಧಿ, ನೆಹರೂ ಸಂಪ್ರದಾಯವನ್ನು ಪಾಲಿಸುವ ನಮಗೆ ಧ್ವಜ ಹಿಡಿಯಲು ಹೆಚ್ಚು ಹಕ್ಕು ಇದೆ. ಟೀಕೆಗಳು ನಮಗೆ ಹೊಸದಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!