ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಪಠ್ಯ ಪುಸ್ತಕ ವಿಚಾರದಲ್ಲಿಯೂ ಕಾಂಗ್ರೆಸ್ ರಾಜಕಾರಣ ಮಾಡುವುದನ್ನು ನಿಲ್ಲಿಸಿಲ್ಲ, ಸರ್ಕಾರ ಯಾವಾಗಲೂ ವ್ಯಕ್ತಿಗಳ ಆಧಾರದಲ್ಲಿ ನಡೆಯುತ್ತದೆ ಎನ್ನುವುದು ಕಾಂಗ್ರೆಸ್ ತಪ್ಪು ಕಲ್ಪನೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಶಾಸನದ ಆಧಾರನಲ್ಲಿ ಸರ್ಕಾರ ನಡೆಸಬೇಕು, ಪರಿಶೀಲನೆ ಮಾಡದೆ ಸರ್ಕಾರ ಪಠ್ಯ ಬದಲಿಸುವುದು ಒಳ್ಳೆಯ ನಿರ್ಧಾರವಲ್ಲ.
ಗೋವಿಂದಾಚಾರ್ಯರ ಪಾಠ ಹಿಂಪಡೆದಿದ್ದು ಖಂಡನಾರ್ಹವಾಗಿದೆ. ವೈಚಾರಿಕ ವಿಚಾರದ ಮೇಲೆ ಸರ್ಕಾರ ದ್ವೇಷ ಸಾಧಿಸುತ್ತಿರುವುದು ಒಳ್ಳೆಯದಲ್ಲ. ಎಲ್ಲ ಬೆಳವಣಿಗೆಗಳನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಿದ್ದಾರೆ.