September 10, 2026
Thursday, September 10, 2026
spot_img

ಪಕ್ಷ ಬಲವರ್ಧನೆಯತ್ತ ಕಾಂಗ್ರೆಸ್ ಚಿತ್ತ: ರಾಜ್ಯದ ಜಿಲ್ಲಾ ಸಮಿತಿಗಳಿಗೆ ನೂತನ ಅಧ್ಯಕ್ಷರ ಸಾರಥ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಬರುವ ರಾಜಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ರಾಜ್ಯದಲ್ಲಿ‌ ಪಕ್ಷದ ಬಲವರ್ಧನೆಗೆ ಸಜ್ಜಾಗಿರುವ ಕಾಂಗ್ರೆಸ್,  ರಾಜ್ಯದ ಎಲ್ಲಾ ಜಿಲ್ಲಾ  ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್  ಈ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ಸಂಘಟನ ಸೃಜನ ಅಭಿಯಾನ’ದ ಅಡಿಯಲ್ಲಿ ಪ್ರತಿಯೊಂದು ಜಿಲ್ಲೆಗೂ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ತಳಮಟ್ಟದಲ್ಲಿ ಪಕ್ಷದ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ವರದಿ ನೀಡಿದ್ದರು. ಈ ವರದಿಯ ಆಧಾರದ ಮೇಲೆ ಹಾಗೂ ರಾಜ್ಯದ ಹಿರಿಯ ನಾಯಕರೊಂದಿಗೆ ಸುದೀರ್ಘ ಚರ್ಚಿಸಿದ ಬಳಿಕ ಅರ್ಹ ಮತ್ತು ಸಕ್ರಿಯ ನಾಯಕರಿಗೆ ಜಿಲ್ಲಾ ಸಾರಥ್ಯವನ್ನು ಹಂಚಿಕೆ ಮಾಡಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಎಲ್ಲಿಗೆ ಯಾರ ಸಾರಥ್ಯ?

ದಕ್ಷಿಣ ಕನ್ನಡ ಜಿಲ್ಲೆಗೆ ಪದ್ಮರಾಜ್‌. ಆರ್‌, ಉಡುಪಿಗೆ ಕಿಶನ್ ಕುಮಾ‌ರ್ ಹೆಗ್ಡೆ ಕೊಳ್ಳೆಬೈಲು, ಉತ್ತರ ಕನ್ನಡಕ್ಕೆ ಗಜಾನನ ತಿಮ್ಮನಾಯ್ಕ, ಬಾಗಲಕೋಟೆಗೆ ದಯಾನಂದ್ ಎಸ್. ಪಾಟೀಲ್, ಬೆಂಗಳೂರು ಉತ್ತರಕ್ಕೆ ಅಬ್ದುಲ್‌ ವಾಜಿದ್, ಬೆಂಗಳೂರು ದಕ್ಷಿಣಕ್ಕೆ ಒ. ಮಂಜುನಾಥ್, ಬೆಂಗಳೂರು ಪೂರ್ವಕ್ಕೆ ಡಿ.ಕೆ. ಮೋಹನ್ ಬಾಬು, ಬೆಂಗಳೂರು ಪಶ್ಚಿಮಕ್ಕೆ ಹನುಮಂತರಾಯಪ್ಪ, ಬೆಂಗಳೂರು ಕೇಂದ್ರಕ್ಕೆ ಜೆ. ಶರವಣನ್, ಬೆಂಗಳೂರು ಗ್ರಾಮಾಂತರಕ್ಕೆ ಸಿ. ಪ್ರಸನ್ನ ಕುಮಾ‌ರ್, ಚಿಕ್ಕೋಡಿಗೆ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ನಗರಕ್ಕೆ ಸಲಾಉದ್ದೀನ್ ಸಿ. ಸಲೀಂ, ಬೆಳಗಾವಿ ಗ್ರಾಮಾಂತರಕ್ಕೆ ಬಸವರಾಜ್ ಶೆಗಾವಿ, ಬಳ್ಳಾರಿ ನಗರಕ್ಕೆ ಅಲ್ಲಂ ಪ್ರಶಾಂತ್, ಬಳ್ಳಾರಿ ಗ್ರಾಮಾಂತರಕ್ಕೆ ಕೆ. ಮಲ್ಲಿಕಾರ್ಜುನ,

ಬೀದ‌ರ್‌ಗೆ ಅಬ್ದುಲ್ ಮನ್ನಾನ್ ಸೇರ್, ಚಾಮರಾಜನಗರಕ್ಕೆ ಜೆ. ಯೋಗೇಶ್, ಚಿಕ್ಕಮಗಳೂರಿಗೆ ಎಚ್.ಪಿ. ಮಂಜೇಗೌಡ, ದಾವಣಗೆರೆಗೆ ಇಬ್ರಾಹಿಂ ಖಲೀಲುಲ್ಲಾ, ಧಾರವಾಡ ಗ್ರಾಮಾಂತರಕ್ಕೆ ಚಂದ್ರಶೇಖರ ಜುಟ್ಟಲ್‌, ಗದಗಕ್ಕೆ ವಾಸಣ್ಣ ಕುರ್ಡಗಿ, ಕಲಬುರಗಿಗೆ ಡಾ. ಕಿರಣ್ ಎ. ದೇಶಮುಖ್ ಹಾಸನಕ್ಕೆ ಶಶಿಧರ್ ಜಿ. ಬಿ, ಹಾವೇರಿಗೆ ಸಂಜೀಬ್ ಕುಮಾರ್ ನೀರಲಗಿ, ಹುಬ್ಬಳ್ಳಿ-ಧಾರವಾಡ ನಗರಕ್ಕೆ ಸಪದಾನಂದ ವಿ. ದಂಗನಾವರʼ ಕೊಡಗಿಗೆ ಧರ್ಮಜ ಉತ್ತಪ್ಪ, ಕೋಲಾರಕ್ಕೆ ಎನ್.ನಾರಾಯಣಸ್ವಾಮಿ, ಮಂಡ್ಯಕ್ಕೆ ಕುಮಾ‌ರ್ ಕೊಪ್ಪ, ಮೈಸೂರು ನಗರಕ್ಕೆ ಆರ್.ಮೂರ್ತಿ, ಮೈಸೂರು ಗ್ರಾಮಾಂತರಕ್ಕೆ ಬೀರಿ ಹುಂಡಿ ಬಸವಣ್ಣ, ರಾಯಚೂರಿಗೆ ಕೆ. ಶಾಂತಪ್ಪ, ಕೊಪ್ಪಳಕ್ಕೆ ಮಲ್ಲಿಕಾರ್ಜುನ ನಾಗಪ್ಪ, ರಾಮನಗರಕ್ಕೆ ಸಿ.ಎನ್.ವೆಂಕಟೇಶ್ 2. ಶಿವಮೊಗ್ಗಕ್ಕೆ ಎಚ್.ಸಿ. ಯೋಗೇಶ್, ಯಾದಗಿರಿಗೆ ಬಸರೆಡ್ಡಿ ಎಂ.ಪಾಟೀಲ್ ಅದ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !