ಕಾಂಗ್ರೆಸ್ ನದ್ದು ಗ್ಯಾರೆಂಟಿ ಕಾರ್ಡ್ ಅಲ್ಲ, ಬೋಗಸ್ ಕಾರ್ಡ್: ಸಿಎಂ ಬೊಮ್ಮಾಯಿ

 ಹೊಸದಿಗಂತ ವರದಿ, ಬಳ್ಳಾರಿ:

ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ವಿವಿಧ ಯೋಜನೆಗಳ ಅನುಷ್ಟಾನದ ಬಗ್ಗೆ ಗ್ಯಾರೆಂಟಿ ಕಾರ್ಡ್ ಗಳನ್ನು ಕೊಡುತ್ತಿದೆ, ಅದು ಗ್ಯಾರೆಂಟಿ ಕಾರ್ಡ್ ಅಲ್ಲ, ಬೋಗಸ್ ಕಾರ್ಡ್ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ್ ರೆಡ್ಡಿ ಅವರ ಪರ ತೆರೆದ ವಾಹನದಲ್ಲಿ ಶನಿವಾರ ಬೃಹತ್ ರೋಡ್ ಶೋ ನಡೆಸಿ, ನಂತರ ಮಾತನಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇರದ ಗ್ಯಾರೆಂಟಿ ಇಲ್ಲಿ ಏಕೆ ಎಂದು ಪ್ರಶ್ನಿಸಿದರು, ಕಾಂಗ್ರೆಸ್ ನವರು ಗೆಲುವು ಬಳಿಕ ಕಾರ್ಡ್ ಗಳಲ್ಲಿರುವ ಯೋಜನೆಗಳ ಅನುಷ್ಟಾನಕ್ಕೆ ಎಂದು ಹೇಳುತ್ತಿದೆ, ಅವರ ಬಣ್ಣದ ಮಾತುಗಳನ್ನು ಜನರು ನಂಬಬೇಡಿ, ಅವರ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ, ಪ್ರತಿಯೋಬ್ಬರೂ ಅಭಿವೃದ್ಧಿ ನಿರೀಕ್ಷಿಸಿ ಬಿಜೆಪಿ ಬೆಂಬಲಿಸಿ ನಮ್ಮ ಅಭ್ಯರ್ಥಿಗಳನ್ನು ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ನ ಮುಖಂಡ ರಾಹುಲ್ ಗಾಂಧಿ ಅವರು ಶುಕ್ರವಾರ ನಗರದಲ್ಲಿ ರೋಡ್ ಶೋ ನಡೆಸಿ, ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಮಾಡ್ತೇವೆ, ಅಂದಿದ್ದರು, ನಿಮ್ಮ ತಾಯಿ ಸೋನಿಯಾ ಗಾಂಧಿ ಅವರು ಇಲ್ಲಿ ಸಂಸದರಾಗಿದ್ದಾಗ ಭರವಸೆ ನೀಡಿದ 3300 ಕೋಟಿ ರೂ. ಪ್ಯಾಕೇಜ್ ಏನಾಯ್ತು, ಎಲ್ಲಿ ಹೋಯ್ತು, ಅವರ ಭರವಸೆಗಳೆಲ್ಲ, ಈಡೇರೋಲ್ಲ, ಬರೀ ಸುಳ್ಳು ಭರವಸೆಗಳು. ಈಗಾಗಲೇ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆಗೆ ಬಜೆಟ್ ನಲ್ಲಿ 50 ಕೋಟಿ ರೂ. ಮೀಸಲಿಡಲಾಗಿದೆ. ನಿಮ್ಮ ಆಶ್ವಾಸನೆಯ ಅವಶ್ಯಕತೆ ಬಳ್ಳಾರಿ ಜನರಿಗೆ ಬೇಕಿಲ್ಲ ಎಂದು ರಾಹುಲ್ ಹೇಳಿಕೆಗೆ ಮುಖ್ಯಮಂತ್ರಿಗಳು ತಿರುಗೇಟು ನೀಡಿದರು.

ಜನ ಮತ್ತು ಹಣದ ನಡುವೆ ಇಲ್ಲಿ ಚುನಾವಣೆ ನಡೆಯಲಿದೆ. ಯಾವಾಗಲೂ ಜನ ಬಲವೇ ಗೆದ್ದಿದೆ. ಹಣ ಬಲ ಕೆಲಸ ಮಾಡೋಲ್ಲ, ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಖಂಡಿತ ಅಸ್ತಿತ್ವಕ್ಕೆ ಬರಲಿದೆ, ಎಸ್ಸಿ, ಎಸ್ಟಿ ಅವರಿಗೆ ಮೀಸಲಾತಿ ಹೆಚ್ವಳ‌ ಅನುಷ್ಟಾನಕ್ಕೆ ಬಿಜೆಪಿಯನ್ನು ಜನರು ಮತ್ತೆ ಅಧಿಕಾರಕ್ಕೆ ತರಬೇಕು. ಇಲ್ಲದಿದ್ದರೆ ಮೀಸಲಾತಿ ಹೆಚ್ಚಳವನ್ನು ಕಿತ್ತಿ ಹಾಕಲಾಗುವುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಜನರು ಇದನ್ನು ಗಮನಿಸಿ ಪ್ರತಿಯೋಬ್ಬರೂ ಬಿಜೆಪಿಗೆ ಮತ ನೀಡಿ ಮನವಿ ಮಾಡಿದರು.
ಗಣಿಗಾರಿಕೆಯ ಶುಲ್ಕದ ಕೆಎಂಆರ್ ಸಿ‌ಯ 25 ಸಾವಿರ ಕೋಟಿ ರೂ. ಫಂಡ್ ನ್ನು ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ಬಳಕೆ ಮಾಡಲು ಕ್ರಮ ತೆಗೆದುಕೊಂಡಿದೆ. ಬರುವ ಒಂದು ವರ್ಷದಲ್ಲಿ ಬಳ್ಳಾರಿ ವಿಮಾನ‌ ನಿಲ್ದಾಣ ಪೂರ್ಣಗೊಳ್ಳಲಿದೆ.
ಬಳ್ಳಾರಿಯ ಚುನಾವಣೆ ಮಹತ್ವದ್ದಾಗಿದೆ. ಕಳೆದ 23 ವರ್ಷಗಳಿಂದ ನಮ್ಮ ಅಭ್ಯರ್ಥಿ ಜಿ. ಸೋಮಶೇಖರ ರೆಡ್ಡಿ ನಿಮ್ಮ ಸೇವೆ ಮಾಡುತ್ತಾ ಬಂದಿದ್ದಾರೆ.
ಬಳ್ಳಾರಿ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಅವರು ಆಂಜನೇಯನ ಭಕ್ತ, ಅಯೋದ್ಯದಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಕರ್ನಾಟಕದಲ್ಲಿ ರಾಮನ ಭಕ್ತ ಆಂಜನೇಯನ ಜನ್ಮ ಸ್ಥಳ ಅಭಿವೃದ್ಧಿಯಾಗಬೇಕು, ಈಗಾಗಲೇ ಅದಕ್ಕಾಗಿ
120 ಕೋಟಿ ರೂ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗಿವೆ. ಅದರ ಶ್ರೇಯಸ್ಸು ಸೋಮಶೇಖರ ರೆಡ್ಡಿಗೆ ಸೇರಲಿದೆ ಎಂದರು.
ಯಾರು ಅವರ ವಿರುದ್ದ ಸ್ಪರ್ಧೆ ಮಾಡಿದ್ದಾರೆ, ಯಾರಿಂದ ಅಭಿವೃದ್ಧಿ ಸಾಧ್ಯ. ಎಂಬುದು ನಿಮಗೆ ಗೊತ್ತಿದೆ.
ಕೆಲವರು ಗೆಲ್ಲಲು, ಕೆಲವರು ಮತ್ತೊಬ್ಬರನ್ನು ಸೋಲಿಸಲು ನಿಂತಿದ್ದಾರೆ. ಇನ್ನೊಬ್ಬರನ್ನು ಸೋಲಿಸುವವರು ಎಂದೂ ಉದ್ದಾರವಾಗೊಲ್ಲ‌ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಗೌಡ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು‌ ವಿರೂಪಾಕ್ಷಗೌಡ , ಸಂಸದ ವೈ.ದೇವೇಂದ್ರಪ್ಪ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!