Wednesday, June 7, 2023

Latest Posts

ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವಾಣ್ ಬೃಹತ್ ರೋಡ್ ಶೋ!

ಹೊಸದಿಗಂತ ವರದಿ, ಬಳ್ಳಾರಿ:

ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ನಗರ ಕ್ಷೇತ್ರದ ಅಭ್ಯರ್ಥಿ ಜಿ.ಗಾಲಿ ಸೋಮಶೇಖರ್ ರೆಡ್ಡಿ ಹಾಗೂ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಪರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಅವರು ನಗರದಲ್ಲಿ ಶನಿವಾರ ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ನಗರ್ ಖೂನಿ ಠಾಣಾ ಮಸೀದಿಯಿಂದ ಪ್ರಾರಂಭವಾದ ರೋಡ್ ಶೋ, ನಗರದ ಕೌಲ್ ಬಜಾರ್ ಪ್ರದೇಶ ಸೇರಿದಂತೆ ನಾನಾ ಕಡೆ ತೆರೆದ ವಾಹನದಲ್ಲಿ ಸಂಚರಿಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ನಗರ್
ಕೌಲ್ ಬಜಾರ್ ಪೊಲೀಸ್ ಠಾಣೆ ಬಳಿ ತೆರೆದ ವಾಹನದಲ್ಲಿ, ಮತದಾರನ್ನುದ್ದೇಶಿಸಿ ಮಾತನಾಡಿ,
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಡಬಲ್ ಇಂಜಿನ್ ಸರ್ಕಾರ ಬಂದಂತೆ, ಇದರಿಂದ ರಾಜ್ಯ ಹಾಗೂ ದೇಶದ ನಾನಾ ಕ್ಷೇತ್ರಗಳಲ್ಲಿ ಇನ್ನೂ ಹಚ್ಚಿನ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ, ಕಾಂಗ್ರೆಸ್ ನವರ ಬಣ್ಣದ ಮಾತುಗಳನ್ನು ಜನರು ನಂಬಬೇಡಿ, ಅವರ ಯಾವುದೇ ಭರವಸೆಗಳಿಗೆ ಮಹತ್ವ ಕೊಡಬೇಡಿ, ಯಾವುದೇ ಅಮೀಷಗಳಿಗೆ ಒಳಗಾಗದೇ ಪ್ರತಿಯೋಬ್ಬರೂ ಅಭಿವೃದ್ಧಿ ನಿರೀಕ್ಷಿಸಿ ಬಿಜೆಪಿ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ
ಮಾಜಿ ಸಂಸದರಾದ ಜಿ.ಶಾಂತ, ಸಣ್ಣ ಫಕ್ಕೀರಪ್ಪ, ಬಿಜೆಪಿ ಮುಖಂಡ ಗುಜರಿ ಅಜೀಜ್ ಸೇರಿದಂತೆ ಅಪಾರ ಬೆಂಬಲಿಗರು, ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!