ಕಾಂಗ್ರೆಸ್‌ ಭ್ರಷ್ಟಾಚಾರ ಎಷ್ಟಿದೆ ಅಂದರೆ ಹಸುವಿನ ಸಗಣಿಯನ್ನೂ ಬಿಟ್ಟಿಲ್ಲ: ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಾಂಗ್ರೆಸ್‌ (Congress) ಭ್ರಷ್ಟಾಚಾರ ಎಷ್ಟಿದೆ ಅಂದರೆ ಹಸುವಿನ ಸಗಣಿಯನ್ನೂ ಬಿಟ್ಟಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ವಾಗ್ದಾಳಿ ನಡೆಸಿದ್ದಾರೆ.

ಛತ್ತೀಸ್‌ಗಢದಲ್ಲಿ (Chhattisgarh) ಬಿಜೆಪಿ (BJP) ನಡೆಸುತ್ತಿರುವ ಎರಡು ‘ಪರಿವರ್ತನ್ ಯಾತ್ರೆ’ಗಳ ಸಮಾರೋಪದಲ್ಲಿ ಮಾತನಾಡಿದ ಅವರು , ಛತ್ತೀಸ್‌ಗಢದ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಡವರಿಗೆ ಕಾಂಗ್ರೆಸ್‌ ಮಾಡಿದಷ್ಟು ಅನ್ಯಾಯವನ್ನು ಯಾರೂ ಮಾಡಿಲ್ಲ. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಪಡಿತರ ನೀಡಲು ನಿರ್ಧರಿಸಿದ್ದೆ. ಆದರೆ ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರ ಅದರಲ್ಲಿ ಭ್ರಷ್ಟಾಚಾರ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈಗ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ 33% ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಬಿಜೆಪಿ ಆಡಳಿತದಲ್ಲಿ ನಾರಿ ಶಕ್ತಿ ಅಧಿನಿಯಮ ಈಗ ನಿಜವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅದಕ್ಕೆ ಸಹಿ ಹಾಕಿ ನಿನ್ನೆ ಕಾನೂನು ಮಾಡಿದ್ದಾರೆ. ಆದರೆ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು. ಈ ಮಸೂದೆ 30 ವರ್ಷಗಳಿಂದ ಬಾಕಿ ಉಳಿದಿತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್‌ ಕೊಟ್ಟಿದ್ದಾರೆ.

ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ನಮ್ಮ ಮೇಲೆ ಅಸಮಾಧಾನಗೊಂಡಿವೆ. ಎಲ್ಲಾ ಮಹಿಳೆಯರು ಮೋದಿಗೆ ಮಾತ್ರ ಆಶೀರ್ವಾದ ಮಾಡುತ್ತಾರೆ ಎಂದು ಅವರು ಭಾವಿಸಿದ್ದಾರೆ. ಅವರು ಮಹಿಳೆಯರನ್ನು ಜಾತಿಗಳಾಗಿ ವಿಭಜಿಸಲು ಬಯಸುತ್ತಾರೆ. ಇದು ಮುಂದಿನ ಸಾವಿರ ವರ್ಷಗಳ ಮೇಲೆ ಪರಿಣಾಮ ಬೀರುವ ನಿರ್ಧಾರ ಎಂದು ನಾನು ಛತ್ತೀಸ್‌ಗಢದ ಮಹಿಳೆಯರಿಗೆ ಹೇಳಬಯಸುತ್ತೇನೆ. ವಿಪಕ್ಷಗಳ ಸುಳ್ಳಿಗೆ ಮರುಳಾಗಬೇಡಿ ಎಂದು ಸಲಹೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!