Tuesday, July 5, 2022

Latest Posts

ಕಾಂಗ್ರೆಸ್ ಮಹಿಳಾ ನೇತಾ ಸಂಸ್ಕಾರ ಇದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊನ್ನೆ ರೇಣುಕಾ ಚೌಧರಿ ಇಂದು ನೆಟ್ಟಾ ಡಿಸೋಜಾ ಕಾಂಗ್ರೆಸ್‌ ನಾಯಕರ ದುರ್ವರ್ತನೆಗೆ ಮಿತಿಯೇ ಇಲ್ಲದಂತಾಗಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಇಡಿ ವಿಚಾರಣೆಯನ್ನು ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ನಿನ್ನೆ ದೆಹಲಿಯಲ್ಲಿ ಪ್ರತಿಭಟನಾ ನಿರತರನ್ನು ಬಂಧಿಸುವ ವೇಳೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕೆ ನೆಟ್ಟಾ ಡಿಸೋಜಾ ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮುಖಕ್ಕೆ ಉಗುಳಿದ್ದಾರೆ.

ಈ ಅಸಹ್ಯಕರ, ಅವಮಾನಕರ ವಿಡಿಯೋ ಇದೀಗ ಎಲ್ಲಡೆ ವೈರಲ್‌ ಆಗಿದ್ದು, ದೆಹಲಿ ಪೊಲೀಸರು ಕಾಂಗ್ರೆಸ್‌ ನಾಯಕಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಉಗುಳಿದ್ದಕ್ಕಾಗಿ ಕಿಮಿನಲ್‌ ಮೊಕದ್ದಮೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿ ರೇಣುಕಾ ಚೌಧರಿಯನ್ನು ಬಂಧಿಸುವ ವೇಳೆ ಪೊಲೀಸ್‌ ಅಧಿಕಾರಿಯ ಕಾಲರ್‌ ಹಿಡಿದು ದರ್ಪ ಮೆರೆದಿದ್ರು. ಆ ಘಟನೆ ಬಳಿಕ ನೆಟ್ಟಾ ಡಿಸೋಜಾ ಉಗುಳಿರುವ ದುರಹಂಕಾರಿ ವರ್ತನೆ ವಿರುದ್ಧ ಕಾಂಗ್ರೆಸ್‌ ಸೋನಿಯಾ, ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಡಿಸೋಜಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss