ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಇಂದು ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಪವಿತ್ರ ಸ್ನಾನದ ನಂತರ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಇಂದು ಮಹಾಕುಂಭದಲ್ಲಿ ಪವಿತ್ರ ನದಿಯಯಲ್ಲಿ, ಸಂಗಮದ ದಡದಲ್ಲಿರುವ ತ್ರಿವೇಣಿ ಘಾಟ್‌ನಲ್ಲಿ ಸ್ನಾನ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಗಂಗಾ ಮಾತೆಗೆ, ಹರ-ಹರ ಗಂಗೆ, ಹರ-ಹರ ಮಹಾದೇವನಿಗೆ ನಮಸ್ಕರಿಸಿ ಎಂದು ಸಚಿನ್ ಪೈಲಟ್ ಪೋಸ್ಟ್ ಮಾಡಿದ್ದಾರೆ.