Saturday, April 1, 2023

Latest Posts

ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಟೀಸರ್ ಬಿಡುಗಡೆ: ತೆರೆಯಲ್ಲಿ ಅಬ್ಬರಿಸಿದ ಧ್ರುವ ಸರ್ಜಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಧ್ರುವ ಸರ್ಜಾ (Dhruva Sarja) ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಟೀಸರ್ (Martin Teaser) ಬಿಡುಗಡೆ ಆಗಿದೆ.
ಕನ್ನಡದಿಂದ ಮತ್ತೊಂದು ಅದ್ಭುತ ಆಕ್ಷನ್ ಸಿನಿಮಾ ಹೊರಬರುತ್ತಿರುವ ನಿರೀಕ್ಷೆಯನ್ನು ಟೀಸರ್ ಮೂಡಿಸಿದೆ.

ಟೀಸರ್ ತುಂಬಾ ಆಕ್ಷನ್ ದೃಶ್ಯಗಳೇ ತುಂಬಿವೆಯಾದರೂ ಆ ದೃಶ್ಯಗಳು ಕುತೂಹಲ ಹುಟ್ಟಿಸುವಂತೆಯೇ ಇದೆ. ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕನ ಮಾಸ್ ಎಂಟ್ರಿ ತೋರಿಸಿರುವ ಅರ್ಜುನ್ ಅಲ್ಲಿಂದ ಭಾರತಕ್ಕೆ ಕತೆಯನ್ನು ಹೇಗೆ ಲಿಂಕ್ ಮಾಡಿದ್ದಾರೆಂಬುದು ಟೀಸರ್ ನೋಡಿದವರ ಕುತೂಹಲ.

ಸರ್​ನಲ್ಲಿ ಬರುವ ಪಾತ್ರವೊಂದು ಹೇಳುವಂತೆ ಅತ್ಯಂತ ಕ್ರೂರಿ ಈ ಮಾರ್ಟಿನ್. ಅಂತೆಯೇ ಧ್ರುವ ಸರ್ಜಾ ಸಹ ಕ್ರೂರ ಮ್ಯಾನರಿಸಂ ಹಾಗೂ ಬೆಟ್ಟದಂಥಹಾ ದೇಹದೊಟ್ಟಿಗೆ ಭೀತಿ ಹುಟ್ಟಿಸುವಂತೆ ಟೀಸರ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಟೀಸರ್ ಭಾರಿ ನಿರೀಕ್ಷೆ ಮೂಡಿಸಿದ್ದು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಟೀಸರ್ ಬಿಡುಗಡೆ ಕಂಡಿದೆ.

ಮಾರ್ಟಿನ್ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದು, ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!