ಕಾಂಗ್ರೆಸ್ ಶಾಸಕ ಟಿ.ಬಿ. ಜಯಚಂದ್ರಗೆ ಬೆದರಿಕೆ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತುಮಕೂರು ಜಿಲ್ಲೆಯ ಶಿರಾ ಕಾಂಗ್ರೆಸ್ ಶಾಸಕ ಟಿ.ಬಿ ಜಯಚಂದ್ರ ಅವರಿಗೆ ಬೆದರಿಕೆ ಕರೆ ಬಂದಿದೆ.
ರೈತರಂತೆ ಕರೆ ಮಾಡಿ ಶಾಸಕ ಟಿ.ಬಿ ಜಯಚಂದ್ರಗೆ ಹೆದರಿಕೆ ಹಾಕಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ನೈಸ್ ಸಂಸ್ಥೆ ಹಗರಣದ ವಿಚಾರವಾಗಿ ರಾಮನಗರಕ್ಕೆ ಭೇಟಿ ನೀಡಿದ್ದರು.ಈ ವೇಳೆ ರೈತರ ಜೊತೆ ಶಾಸಕ ಟಿಬಿ ಜಯಚಂದ್ರ ಅವರು ಚರ್ಚೆ ಮಾಡಿದ್ದಾರೆ ರೈತರ ಭೇಟಿ ಬೆನ್ನಲ್ಲೇ ಬೆದರಿಕೆ ಕರೆಗಳು ಬಂದಿವೆ.

ನನಗೆ ಬೆದರಿಕೆ ಕರೆ ಬಂದಿದ್ದು ನಿಜ ಎಂದಿದ್ದಾರೆ. ನೈಸ್ ಸಂಸ್ಥೆಯ ಅಕ್ರಮದ ಬಗ್ಗೆ ನಾನು ರಿಪೋರ್ಟ್ ನೀಡಿದ್ದೆ. ಸಾವಿರಾರು ಎಕರೆ ಸರ್ಕಾರಿ, ಖಾಸಗಿ ರೈತರ ಜಮೀನು ಕಬಳಿಸಿದ್ದಾರೆ ಎಂದುಟಿ.ಬಿ ಜಯಚಂದ್ರ ಹೇಳಿದರು.

ರೈತರು ಆಹ್ವಾನಿಸಿದ್ದರಿಂದ ಬಿಡದಿಗೆ ಹೋಗಿದ್ದೆ. ಅವರನ್ನು ಭೇಟಿ ಮಾಡಿ ಬಂದ ಬಳಿಕ ಬೆದರಿಕೆ ಕರೆ ಶುರುವಾಗಿದೆ. ನೀವು ಈ ಕ್ಷೇತ್ರದಲ್ಲಿ ಎಲೆಕ್ಷನ್​ಗೆ ನಿಲ್ಲಬೇಕಾ. ನಿಮಗೂ ಇದಕ್ಕೂ ಏನು ಸಂಬಂಧ. ಯಾಕೆ ಬರ್ತಿರಾ ಅಂತ ಕೇಳುತ್ತಿದ್ದರು.ನಾನು ಸಾರ್ವಜನಿಕ ಜೀವನದಲ್ಲಿ 45 ವರ್ಷಗಳಿಂದ ಇದ್ದೇನೆ. ಇದಕ್ಕೆಲ್ಲ ಹೆದರಲ್ಲ ಎಂದು ಹೇಳಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!