Sunday, June 26, 2022

Latest Posts

ಪಂಜಾಬ್‌ನ ಕಾಂಗ್ರೆಸ್ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ: ಶಾಸಕ ಎಲ್ ನಾಗೇಂದ್ರ ಆಗ್ರಹ

ಹೊಸದಿಗಂತ ವರದಿ,ಮೈಸೂರು:

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ನೀಡುವಲ್ಲಿ ಪಂಜಾಬ್‌ನ ಕಾಂಗ್ರೆಸ್ ಸರ್ಕಾರ ಭಾರೀ ಲೋಪವೆಸಗಿದೆ. ಹಾಗಾಗಿ ಕೂಡಲೇ ಆ ಸರ್ಕಾರವನ್ನು ವಜಾಗೊಳಿಸಿ, ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕೆಂದು ಚಾಮರಾಜಕ್ಷೇತ್ರದ ಬಿಜೆಪಿ ಶಾಸಕ ಎಲ್ ನಾಗೇಂದ್ರ ಆಗ್ರಹಿಸಿದರು.
ಶುಕ್ರವಾರ ಬಿಜೆಪಿ ಚಾಮರಾಜ ಕ್ಷೇತ್ರದ ವತಿಯಿಂದ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ನಡೆದ ಮೃತ್ಯುಂಜಯ ಹೋಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ವಿರುದ್ಧ ವೈಯಕ್ತಿಕವಾಗಿ ದ್ವೇಷ ಸಾಧಿಸುತ್ತಿರುವ ಕಾಂಗ್ರೆಸ್ ಪಕ್ಷ, ಭದ್ರತೆಯಲ್ಲಿ ವೈಫಲ್ಯವೆಸಗುವ ಮೂಲಕ ಅವರ ಜೀವದ ಜೊತೆ ಚೆಲ್ಲಾಟವಾಡಿದೆ ಎಂದು ಆರೋಪಿಸಿದರು.
ಸ್ವಾರ್ಥ ರಾಜಕೀಯಕ್ಕಾಗಿ ಎಸಗಿರುವ ಇಂತಹ ಲೋಪಗಳು ದೇಶದ ಭದ್ರತೆಗೆ ಸವಾಲೊಡ್ಡಲಿವೆ. ಪ್ರಧಾನಿ ಫಿರೋಜ್‌ಪುರದಲ್ಲಿ ಸುಮಾರು 42 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಅಡಿಗಲ್ಲು ಹಾಕಲು ಹೊರಟಿದ್ದರು. ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮುಖ್ಯಮಂತ್ರಿ, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕ ಬಾರದೇ ಇರುವುದು ಕೂಡ ಸಂಶಯಾಸ್ಪದ ವರ್ತನೆಯಾಗಿದೆ ಎಂದರು.
ಪ್ರಧಾನಿ ಬರುವ ಹಾದಿಯಲ್ಲಿ ಲಾರಿ ಹಾಗೂ ಟ್ರಾ÷್ಯಕ್ಟರ್ ಸಮೇತ ಬಂದು ಪ್ರತಿಭಟನಾಕಾರರು ರಸ್ತೆ ಬಂದ್ ಮಾಡಿದ್ದಾರೆ. ಇದು ಪಂಜಾಬ್‌ನ ಗುಪ್ತಚರ ದಳಕ್ಕೆ ಗೊತ್ತಿರಲಿಲ್ಲವೇ. ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ಇಂತಹ ಉದಾಸೀತನೆ ಸರ್ವಥಾ ಸಮರ್ಥನೀಯವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಮೈ.ಕಾ.ಪ್ರೇಮ್ ಕುಮಾರ್ ,ಬಿಜೆಪಿ ನಗರ ಉಪಾಧ್ಯಕ್ಷ ಹರ್ಷ,ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕ ಗಿರೀಶ್ ,ಲಕ್ಷ್ಮಿ, ನವೀನ್,ಬಿಜೆಪಿ ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್ , ಮಂಜುನಾಥ್ ,ಸುರೇಂದ್ರ,ರಾಜೇAದ್ರ , ವಿಘ್ನೇಶ್ವರ ಭಟ್, ಸುದರ್ಶನ್ ,ದಿನೇಶ್ ಗೌಡ ,ತನುಜಾ ಮಹೇಶ್ ,ಶೋಭಾ, ಆನಂದ್ ,ಕಾಂತಿಲಾಲ್ ಜೈನ್,ಶರ್ಮಾ ,ಪಾಪಣ್ಣ, ಶ್ರೀನಿವಾಸ್ ಇನ್ನಿತರರು ಹಾಜರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss