Friday, February 23, 2024

ಐದನೇ ದಿನದ ಪಾದಯಾತ್ರೆಗೆ ಕಾಂಗ್ರೆಸ್ ಸಜ್ಜು: ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮನ

ದಿಗಂತ ವರದಿ ರಾಮನಗರ :

ಮೇಕೆದಾಟು ಯೋಜನೆಗೆ ಒತ್ತಾಯಿಸಿ 5ನೇ ದಿನದ ಪಾದಯಾತ್ರೆಗಾಗಿ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ರಮಾನಾಥ ರೈ, ಬಿ.ಕೆ.ಹರಿಪ್ರಸಾದ್, ಚಲುವರಾಯಸ್ವಾಮಿ ಸ್ವಾಮಿ, ಧ್ರುವನಾರಾಯಣ್, ಶರತ್ ಬಚ್ಚೇಗೌಡ, ಅಪ್ಪಾಜಿಗೌಡ, ಮಧು ಮಾದೇಗೌಡ, ನರೇಂದ್ರಸ್ವಾಮಿ ಮುಂತಾದವರು ಆಗಮಿಸಿದ್ದಾರೆ. ಹಲವು ಜಾನಪದ ಕಲಾತಂಡಗಳು ಭಾಗವಹಿಸಿವೆ. ಬಂದೋಬಸ್ತ್ ಗಾಗಿ ಎಡಿಜಿಪಿ ಪ್ರತಾಪ್ ರೆಡ್ಡಿ, ಎಸ್ಪಿ ಎಸ್.ಗಿರೀಶ್, ಹಿರಿಯ ಅಧಿಕಾರಿಗಳಾದ ಅನೂಪ್ ಶೆಟ್ಟಿ, ಮಿಥುನ್ ಕುಮಾರ್ ಮತ್ತಿತರರು ನಿಯೋಜಿತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!