ದಿಗಂತ ವರದಿ ವಿಜಯಪುರ:
ಕಾಂಗ್ರೆಸ್ ನವರು ಸುಳ್ಳು ದಾಖಲೆ ಸೃಷ್ಟಿ ಮಾಡುವುದರಲ್ಲೇ ಸಮಯ ಕಳೆದು ಬಿಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಮೊದಲು ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಗುರುವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪಾಪ ಕಾಂಗ್ರೆಸ್ ನವರಿಗೆ ಅವರ ಕಾಲದಲ್ಲಿ ಏನಾಯಿತು, ಇವರ ಕಾಲದಲ್ಲಿ ಏನಾಯಿತು ಎಂದೇ ಸುಳ್ಳು ದಾಖಲೆ ಸೃಷ್ಟಿಸುತ್ತ ಸಮಯ ಕಳೆಯುತ್ತಿದ್ದಾರೆ ಎಂದರು.
ಇವತ್ತು ಸರ್ಕಾರಕ್ಕೆ 136 ಜನ ಶಾಸಕರನ್ನು ಗೆಲ್ಲಿಸಿ ಅವರಿಗೆ ಜನ ಶಕ್ತಿ ತುಂಬಿದ್ದಾರೆ. ಹೀಗಾಗಿ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಹಿಂದೇಂದು ಈ ರಾಜ್ಯದ ಇತಿಹಾಸದಲ್ಲಿ ಈ ರೀತಿ ನಡೆದಿರಲಿಲ್ಲ ಎಂದರು.
ಈ ಪಾದಯಾತ್ರೆಯ ಯಶಸ್ಸು ಎರಡು ಪಕ್ಷಕ್ಕೆ ಸಿಗತ್ತೆ ಎಂಬ ಹಿನ್ನೆಲೆಯಲ್ಲಿ. ಅದ್ಯಾವುದೋ ಹೆಸರಲ್ಲಿ ಇವರು ಕಾರ್ಯಕ್ರಮ ಮಾಡಿದರು. ತಮ್ಮ ತಪ್ಪಿನಿಂದ ನುಣುಚಿಕೊಳ್ಳಲು ವಿರೋಧ ಪಕ್ಷಕ್ಕೆ ಪ್ರಶ್ನೆ ಕೇಳುವ ಸನ್ನಿವೇಶ ಪ್ರಾರಂಭ ಮಾಡಿದ್ದಾರೆ ಎಂದರು.