ಭಾರತ್ ಜೋಡೋ ಯಾತ್ರೆ ವರ್ಷಾಚರಣೆಗೆ ಕಾಂಗ್ರೆಸ್ ಪ್ಲಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ್ ಜೋಡೋ ಯಾತ್ರೆ ವರ್ಷಾಚರಣೆ ಆಚರಿಸಲು ಕಾಂಗ್ರೆಸ್ ತಯಾರಿ ನಡೆಸಿದ್ದು, ಸೆಪ್ಟೆಂಬರ್ 7 ರಂದು ದೇಶದ ಎಲ್ಲಾ ಜಿಲ್ಲೆ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಆಯೋಜಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

ಕಳೆದ 2022ರ ಸೆಪ್ಟೆಂಬರ್ 7 ರಂದು ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದರು. ಇದೀಗ ಜೋಡೋ ವರ್ಷಾಚರಣೆ ಪ್ರಯುಕ್ತ ಕಾಂಗ್ರೆಸ್ ವಿಶೇಷ ಯಾತ್ರೆ ಹಮ್ಮಿಕೊಂಡಿದೆ. ಸೆಪ್ಟೆಂಬರ್ 7 ರಂದು ಸಂಜೆ 5 ಗಂಟೆಯಿಂದ 6 ಗಂಟೆ ವರೆಗೆ ಎಲ್ಲಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

130 ದಿನಗಳ ಅತೀ ದೊಡ್ಡ ಯಾತ್ರೆ 12 ರಾಜ್ಯಗಳಲ್ಲಿ ಹಾದು ಹೋಗಿತ್ತು. ಕನ್ಯಾಕುಮಾರಿಯಿಂದ ಆರಂಭಗೊಂಡು, ಕಾಶ್ಮೀರದಲ್ಲಿ ಅಂತ್ಯಗೊಂಡಿತ್ತು. ಜನವರಿ 30, 2023ರ ವರೆಗೆ ಈ ಯಾತ್ರೆ ನಡೆದಿತ್ತು. ಮೊದಲ ಆವೃತ್ತಿಯ ಭಾರತ್ ಜೋಡೋ ಯಾತ್ರೆ ವರ್ಷಾಚರಣೆ ಪ್ರಯುಕ್ತ ದೇಶದ ಎಲ್ಲಾ ಮೂಲೆ ಮೂಲೆಯಲ್ಲಿ ಯಾತ್ರೆ ಆಯೋಜಿಸಲಾಗಿದೆ.

ಇನ್ನು ಎರಡನೇ ಆವೃತ್ತಿಯ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಶೀಘ್ರದಲ್ಲೇ ಆರಂಭಿಸಲು ಪ್ಲಾನ್ ಮಾಡಿದೆ. ಈ ಯಾತ್ರೆ ಗುಜರಾತ್‌ನಿಂದ ಆರಂಭಗೊಳ್ಳಲಿದ್ದು, ಮೆಘಾಲಯ, ಮಣಿಪುರ , ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಸಂಚರಿಸಲಿದೆ. ಇತ್ತೀಚೆಗೆ ರಾಹುಲ್ ಗಾಂಧಿ 9 ದಿನದ ಲಡಾಖ್ ಪ್ರವಾಸ ಮಾಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!