ಸೂರ್ಯನತ್ತ ಆದಿತ್ಯ-ಎಲ್​1: ಮೊದಲ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆದಿತ್ಯ-ಎಲ್​1 ಬಾಹ್ಯಾಕಾಶ ನೌಕೆಯ ಭೂಮಿಯ ಮೊದಲ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.

ಸೂರ್ಯನ ಸಮಗ್ರ ಅಧ್ಯಯನಕ್ಕಾಗಿ ಶನಿವಾರ ಆದಿತ್ಯ-ಎಲ್​1 ಉಡಾವಣೆಗೊಂಡಿದ್ದು, ಭೂಮಿಯ ಮೊದಲ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ-ಎಲ್​1 ಬಾಹ್ಯಾಕಾಶ ನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಭಾರತದ ಮೊದಲ ಸೌರ ಅಧ್ಯಯನ ನೌಕೆಯೂ ಹೌದು.

ಆದಿತ್ಯ-ಎಲ್​1 ಉಪಗ್ರಹವು ಆರೋಗ್ಯಯುತವಾಗಿದೆ ಮತ್ತು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ.ಬೆಂಗಳೂರಿನಲ್ಲಿ ಐಎಸ್​​ಟಿಆರ್​ಎಸಿ (ISTRAC) ಕೇಂದ್ರದಿಂದ ಭೂಮಿಯ ಮೊದಲ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು (Earth bound maneuvre) ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮುಂದಿನ ಎರಡನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಸೆಪ್ಟೆಂಬರ್​ 5ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

https://twitter.com/isro/status/1698224462821544411/photo/1

ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ಆದಿತ್ಯ-ಎಲ್1 ನೌಕೆಯು ಪಿಎಸ್‌ಎಲ್‌ವಿ ರಾಕೆಟ್​ನಿಂದ ನಭಕ್ಕೆ ಚಿಮ್ಮಿತ್ತು. ನಂತರ ರಾಕೆಟ್​ನಿಂದ ಯಶಸ್ವಿಯಾಗಿ ಬೇರ್ಪಟ್ಟು ಕಕ್ಷೆಗೆ ಸೇರಿತ್ತು. ಭೂಮಿಯಿಂದ ಸೂರ್ಯನ ಕಡೆಗೆ ಸರಿಸುಮಾರು 1.5 ಲಕ್ಷ ಕಿಲೋ ಮೀಟರ್ ದೂರ ಕ್ರಮಿಸಿ, ಬಾಹ್ಯಾಕಾಶದಲ್ಲಿ ನಿಲ್ಲುತ್ತದೆ. ಇದು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ ಸುಮಾರು ಶೇ.1ರಷ್ಟು ಮಾತ್ರ ಆಗಿದ್ದು, ಅಲ್ಲಿಗೆ ಉಪಗ್ರಹ ತಲುಪಲು 125 ದಿನಗಳು ಹಿಡಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!