ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.ಹೀಗಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಮ್ಮ ಪಕ್ಷದ ಅಭ್ಯರ್ಥಿ, ವಿಜಯ ಕಂಡ ಬೆನ್ನಲ್ಲಿಯೇ ತಕ್ಷಣವೇ ಪಕ್ಷದ ಕಚೇರಿಗೆ ಆಗಮಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆದೇಶಿಸಿದೆ.
ಹಿಮಾಚಲ ಪ್ರದೇಶದ ವೀಕ್ಷಕರಾಗಿ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಹೈಕಮಾಂಡ್ ನೇಮಿಸಿದೆ. ಇನ್ನು ಕೆಲ ಹೊತ್ತಿನಲ್ಲಿ ಈ ಇಬ್ಬರೂ ನಾಯಕರು ಶಿಮ್ಲಾ ತಲುಪಲಿದ್ದಾರೆ ಎಂಬ ಮಾಹಿತಿ ಇದೆ.
ಮೂಲಗಳ ಪ್ರಕಾರ, ಬಿಜೆಪಿ ನಾಯಕರ ಸಂಪರ್ಕದಿಂದ ದೂರವಿರಲು ರಾಜ್ಯದಿಂದ ಚುನಾವಣೆಯಲ್ಲಿ ಗೆದ್ದ ಎಲ್ಲಾ ಶಾಸಕರನ್ನು ಕಾಂಗ್ರೆಸ್ ಬೇರೆ ರಾಜ್ಯಗಳಿಗೆ ಕರೆದೊಯ್ಯಬಹುದು ಎನ್ನಲಾಗುತ್ತಿದ್ದರೂ, ಬಂದಿರುವ ಮಾಹಿತಿಯ ಪ್ರಕಾರ ಎಲ್ಲರೂ ಚಂಡೀಗಢಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
40ಕ್ಕಿಂತ ಕಡಿಮೆ ಅಥವಾ ಆಸುಪಾಸಿನ ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ ಪಕ್ಷವು ಎಲ್ಲಾ ಶಾಸಕರ ಮೇಲೆ ತೀವ್ರ ನಿಗಾ ಇಡಲಿದೆ ಎನ್ನಲಾಗಿದೆ.