ಹೊಸದಿಗಂತ ವರದಿ, ಬಳ್ಳಾರಿ:
ರಾಜ್ಯದ ನಾನಾ ಕಡೆ ನಡೆಯುತ್ತಿರುವ ನಮ್ಮ ಬಿಜೆಪಿ ಸಮಾವೇಶಗಳನ್ನು ನೋಡಿ ಕಾಂಗ್ರೆಸ್ ನವರಿಗೆ ನಡುಕ ಶುರುವಾಗಿದೆ, ಜನರಿಗೆ ಮಂಕಬೂದಿ ಹಚ್ಚಿ ಒಡೆದಾಳುವ ಕಾಂಗ್ರೆಸ್ ನೀತಿ ಇನ್ಮುಂದೆ ನಡೆಯೋಲ್ಲ ಎಂದು ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಬಳಿಯ, ಜಿ-ಸ್ಕ್ವಾಯರ್ ಪ್ರದೇಶದಲ್ಲಿ ಶನಿವಾರ ಬಿಜೆಪಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡಗಳ ಸಮಾವೇಶದಲ್ಲಿ ಮಾತನಾಡಿದರು. ಸಮಾವೇಶಗಳಲ್ಲಿ ಜನರು ಸೇರುವ ಸಂಖ್ಯೆ ನೋಡಿ ಕಾಂಗ್ರೆಸ್ ನವರಿಗೆ ಆಘಾತವಾಗಿದೆ. ಅದರಲ್ಲೂ ಬಳ್ಳಾರಿಯಲ್ಲಿ ಸೇರಿದ್ದ ಜನರನ್ನು ನೋಡಿ ಕೈ ನಾಯಕರಿಗೆ ನಡುಕ ಶುರುವಾಗಿದೆ. ಅವಧಿಯಲ್ಲಿ ಸರ್ಕಾರದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ, ರಜೆ ಘೋಷಯ, ವಾಲ್ಮೀಕಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಬಿಜೆಪಿ ಸರ್ಕಾರ, ಕಳೆದ ಸುಮಾರು ವರ್ಷಗಳ ಬೇಡಿಕೆಯಾಗಿದ್ದ ಎಸ್ಟಿ ಹಾಗೂ ಎಸ್ಸಿ ಮೀಸಲಾತಿ ಹೆಚ್ಚಳವನ್ನು ನಮ್ಮ ಸರ್ಕಾರ ಮಾಡಿದೆ, ಮುಖ್ಯಮಂತ್ರಿ ಆಗಿದ್ದಾಗ ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸಚಿವ ಶ್ರೀರಾಮುಲು, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಏನ್ ಕೇಳಿದ್ದಾರೆ, ಅವೆಲ್ಲವನ್ನೂ ಕೊಟ್ಟಿರುವೆ, ಅಭಿವೃದ್ಧಿಗಾಗಿ ನಾವು ಹಿಂದೂ ಮುಂದೆ ನೋಡೋಲ್ಲ, ನಮಗೆ ಅಭಿವೃದ್ಧಿ ಮುಖ್ಯ. ಉಭಯ ಜಿಲ್ಲೆಗಳ 10ಕ್ಕೆ 10 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು, ಕಳೆದ ಬಾರಿ 5 ಸೀಟ್ ಗಳು ಬಂದಿವೆ, ಈಬಾರಿ 10 ಕ್ಷೇತ್ರಗಳಲ್ಲೂ ಬಿಜೆಪಿಯ ಕಮಕ ಅರಳಬೇಕು, 140-150 ಸೀಟ್ ಗಳನ್ನು ಗೆಲ್ಲುವ ಮೂಲಕ ಮತ್ತೋಮ್ಮ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ. ನಿಮ್ಮೆಲ್ಲರ ಬೆಂಬಲ, ಆರ್ಶಿವಾದ ಇರಬೇಕು ಎಂದರು.