Sunday, December 3, 2023

Latest Posts

ಛತ್ತೀಸ್‌ಗಢದ 30 ಅಭ್ಯರ್ಥಿಗಳ ಕಾಂಗ್ರೆಸ್ ಮೊದಲ ಪಟ್ಟಿ ಔಟ್:‌ ಪಟಾನ್‌ನಿಂದ ಸಿಎಂ ಬಘೇಲ್ ಕಣಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ನವೆಂಬರ್‌ 7, 17, 23 ಹಾಗೂ30 ರಂದು ಐದು ರಾಜ್ಯಗಳ ಚುನಾವಣೆ ನಡೆಯಲಿದೆ.

ವಿಧಾನಸಭಾ ಚುನಾವಣೆ ಹಿನ್ನೆಲೆ ಛತ್ತೀಸ್‌ಗಢ ಕಾಂಗ್ರೆಸ್ 30 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ.
ಛತ್ತೀಸ್‌ಗಢದ 20 ಸ್ಥಾನಗಳಿಗೆ ಮೊದಲ ಹಂತದ ಮತದಾನ ನವೆಂಬರ್ 7ರಂದು ನಡೆಯಲಿದ್ದು, ಉಳಿದ 70 ಸ್ಥಾನಗಳಿಗೆ ನವೆಂಬರ್ 17 ರಂದು ಮತದಾನ ನಡೆಯಲಿದೆ.

ರಾಜ್ಯದಲ್ಲಿ ಆಡಳಿತಾರೂಢ ಪಕ್ಷವು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಪಟಾನ್‌ನಿಂದ ಮತ್ತು ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಅವರನ್ನು ಅಂಬಿಕಾಪುರದಿಂದ ಕಣಕ್ಕಿಳಿಸಿದೆ.

ಛತ್ತೀಸ್‌ಗಡದ 90ಸ್ಥಾನಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್‌ 3ರಂದು ಫಲಿತಾಂಶ ಹೊರಬೀಳಲಿದೆ.

30 ಅಭ್ಯರ್ಥಿಗಳ ಮೊದಲ ಪಟ್ಟಿ ಹೀಗಿದೆ..

ಕಾಂಗ್ರೆಸ್ ನಾಯಕ ತಾರಧ್ವಜ್ ಸಾಹು ದುರ್ಗ್ (ಗ್ರಾಮೀಣ), ರವೀಂದ್ರ ಚೌಬೆ ನವಗಢದಿಂದ, ಯಶೋದಾ ವರ್ಮಾ ಖೈರಗಢದಿಂದ, ವಿಕ್ರಮ್ ಮಾಂಡವಿ ಬಿಜಾಪುರದಿಂದ, ಲಖೇಶ್ವರ್ ಬಘೇಲ್ ಬಸ್ತಾರ್‌ನಿಂದ, ದೀಪಕ್ ಬೈಜಿ ಚಿತ್ರಕೋಟ್‌ನಿಂದ ಮತ್ತು ಕೆ ಚವೀಂದ್ರ ಕರ್ಮ ದಾಂತೇವಾಡದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!