ವಂದೇ ಭಾರತ್ ಖಾಲಿ ಓಡಾಡುತ್ತಿದೆ ಎಂದ ಕಾಂಗ್ರೆಸ್: ಸುಳ್ಳುಗಳ ಗುಳ್ಳೆ ಹೊಡೆಯುವ ಸಮಯ ಬಂದಿದೆ ಎಂದ ರೈಲ್ವೆ ಸಚಿವರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಂದೇ ಭಾರತ್ ರೈಲುಗಳು ಖಾಲಿ ಓಡಾಡುತ್ತಿವೆ ಎಂದು ಕೇರಳ ಘಟಕದ ಕಾಂಗ್ರೆಸ್ ಪಕ್ಷ ಮಾಡಿದ ಆರೋಪವನ್ನು ಕೇಂದ್ರ ರೈಲ್ವೆ ಸಚಿವ ಡಾ. ಎ ವೈಷ್ಣವ್ (Ashwini vaishnaw) ತಳ್ಳಿಹಾಕಿದ್ದಾರೆ.

2024-25ರ ಹಣಕಾಸು ವರ್ಷದಲ್ಲಿ ವಂದೇ ಭಾರತ್ ರೈಲುಗಳಲ್ಲಿಪ್ರಯಾಣಿಕರ ಸಂಖ್ಯೆ ಶೇ. 103ರಷ್ಟಿದೆ. ಕಾಂಗ್ರೆಸ್ ಪಕ್ಷದ ಸುಳ್ಳುಗಳ ಗುಳ್ಳೆಯನ್ನು ಒಡೆಯುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.

ಐಆರ್​ಸಿಟಿಸಿಯ ಟಿಕೆಟ್ ಬುಕಿಂಗ್ ಡಾಟಾದ ವಿಶ್ಲೇಷಣೆಯೊಂದನ್ನು ಆಧರಿಸಿ ಕಾಂಗ್ರೆಸ್ ಪಕ್ಷ ನಿನ್ನೆ (ಬುಧವಾರ) ಸರಣಿ ಟ್ವೀಟ್ ಮಾಡಿ, ವಂದೇ ಭಾರತ್ ಎಂಬ ಗುಳ್ಳೆಯನ್ನು ಒಡೆಯಲು ನಿರ್ಧರಿಸಿದ್ದೇವೆ ಎಂದು ಆರಂಭಿಸಿ, ದೇಶದ ವಿವಿಧ ಮಾರ್ಗಗಳಲ್ಲಿ ಶೇ. 50ಕ್ಕಿಂತ ಹೆಚ್ಚು ವಂದೇ ಭಾರತ್ ರೈಲುಗಳು ಖಾಲಿ ಓಡಾಡುತ್ತಿವೆ ಎಂದು ಹೇಳಿತ್ತು.

ಇದಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಪೋಸ್ಟ್​ನಲ್ಲೇ ಉತ್ತರ ಕೊಟ್ಟಿದ್ದಾರೆ. ‘ಕಾಂಗ್ರೆಸ್​ನ ಸುಳ್ಳುಗಳ ಗುಳ್ಳೆಯನ್ನು ಹೊಡೆಯುವ ಸಮಯ ಬಂದಿದೆ. ಮೇ 7ರಂದು ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರ ಪ್ರಮಾಣ ಶೇ. 98ರಷ್ಟಿತ್ತು. 2024-25ರ ಹಣಕಾಸು ವರ್ಷದಲ್ಲಿ (ಮೇ 7ರವರೆಗೆ) ಪ್ರಯಾಣಿಕರ ಸಂಖ್ಯೆ ಶೇ. 103ರಷ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ವಂದೇ ಭಾರತ್ ರೈಲು ನಿಲ್ಲುವುದು ಬೇಕಾ?’ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!