Friday, June 2, 2023

Latest Posts

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯನ್ನಾಗಿ ಮಾಡುವೆ: ರಾಹುಲ್ ಗಾಂಧಿ

ಹೊಸದಿಗಂತ ವರದಿ, ಬಳ್ಳಾರಿ:

ಗಣಿನಾಡು ಬಳ್ಳಾರಿ ಗಣಿಗಾರಿಕೆಗೆ ಮಾತ್ರ ಹೆಸರಾಗಿಲ್ಲ, ಜೀನ್ಸ್ ಉದ್ಯಮದಲ್ಲೂ ದೇಶ ವಿದೇಶಗಳ ಗಮನಸೆಳೆದಿದೆ. ಮತದಾರರ ಆರ್ಶಿವಾದದಿಂದ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯನ್ನಾಗಿ ಮಾಡುವೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ, ಯುವ ನಾಯಕ ರಾಹುಲ್ ಗಾಂಧಿ ಅವರು ಹೇಳಿದರು.

ನಗರದಲ್ಲಿ ಶುಕ್ರವಾರ ಸಂಜೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ, ನಗರ ಕ್ಷೇತ್ರದ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರ ಪರ ನಗರದಲ್ಲಿ ರೋಡ್ ಶೋ ಬಳಿಕ ಮೋತಿ ವೃತ್ತದ ಬಳಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಭಾರತ್ ಜೋಡೋ ಪಾದಯಾತ್ರೆ ವೇಳೆ ಇಲ್ಲಿನ ಜೀನ್ಸ್ ಉದ್ಯಮವನ್ನು ಗಮನಿಸಿರುವೆ, ಇಲ್ಲಿನ ಜೀನ್ಸ್ ಉಡುಪುಗಳು ದೇಶವಷ್ಟೇ ಅಲ್ಲ, ವಿದೇಶಗಳಲ್ಲೂ ಹೆಸರು ಪಡೆದಿವೆ. ಸರ್ಕಾರ ಬಂದ ಕೂಡಲೇ 5 ಸಾವಿರ ಕೋಟಿ ವೆಚ್ಚದಲ್ಲಿ ಜೀನ್ಸ್ ಇಂಡಸ್ಟ್ರೀಸ್ ಪಾರ್ಕ್ ನ್ನು ಸ್ಥಾಪಿಸಿ, ಮೇಡ್ ಇನ್ ಬಳ್ಳಾರಿ ಜೀನ್ಸ್ ಎನ್ನುವ ಹೆಸರು ಮಾಡುವೆ, ಇದು ಭರವಸೆಯಲ್ಲ ಇದು ನನ್ನ ಸಂಕಲ್ಪ ಎಂದು ಭರವಸೆ ನೀಡಿದರು.

ಶೇ.40 ಬಿಜೆಪಿ ಸರ್ಕಾರವನ್ನು ಕಿತ್ತೋಗೆಯಲು ಪ್ರತಿಯೋಬ್ಬರೂ ಸಂಕಲ್ಪ ಮಾಡಬೇಕು, ಅವರಿಗೆ ಅದೇ ಸಂಖ್ಯೆಯಲ್ಲಿ ಸ್ಥಾನಗಳು ಬರಲಿವೆ. ಈ  ಹಿಂದೆ ಬಳ್ಳಾರಿ ಬ್ರಷ್ಟಾಚಾರದ ಕೇಂದ್ರವಾಗಿತ್ತು, ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದರು. ಬಳ್ಳಾರಿಯ ಜನರು ಬದಲಾವಣೆ ಬಯಸಿದ್ದು, ಅಭ್ಯರ್ಥಿಗಳಾದ ನಾರಾ ಭರತ್ ರೆಡ್ಡಿ, ಬಿ.ನಾಗೇಂದ್ರ, ಈ.ತುಕಾರಾಂ, ಬಿ.ಎಂ.ನಾಗರಾಜ್, ಜೆ.ಎನ್.ಗಣೇಶ್ ಅವರಿಗೆ ಬೆಂಬಲಿಸಿ ಆರ್ಶಿವಾದಿಸಿ, ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಬದಲಾಗಲಿದೆ. ಕಪ್ಪುಹಣ ತಂದು ಜನರಿಗೆ ನೇರ ಖಾತೆಗೆ ಹಣ ಜಮಾ ಮಾಡುವೆ ಅಂದ್ರು ಅದನ್ನು ಮಾಡಲಿಲ್ಲ, 371ಜೆ ತಂದಿದ್ದು, ನಮ್ಮ ಸರ್ಕಾರ, ಇದಯ ಜಾರಿಯಿಂದ ಕ.ಕ.ಭಾಗದ 50ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆತಿದೆ. ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ ಹಾಗೂ ನಗರ ಕ್ಷೇತ್ರದ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಮಾತನಾಡಿ, ಅಭಿವೃದ್ಧಿ ನಿರೀಕ್ಷಿಸಿ ಪ್ರತಿಯೋಬ್ಬರೂ ಕಾಂಗ್ರೆಸ್ ಬೆಂಬಲಿಸಿ ಆರ್ಶಿವಾದಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸುರ್ಜೆವಾಲಾ, ಅಲ್ಲಂ ವೀರಭದ್ರಪ್ಪ, ಮಹ್ಮದ್ ರಫೀಕ್, ವಿ.ಎಸ್.ಉಗ್ರಪ್ಪ, ನಾಸೀರ್ ಹುಸೇನ್, ಜೆ.ಎಸ್.ಆಂಜಿನೇಯಲು, ಅಲ್ಲಂ ಪ್ರಶಾಂತ್, ರಾವೂರ್ ಸುನೀಲ್, ಸುಬ್ಬರಾಯಡು, ವೆಂಕಟೇಶ ಹೆಗಡೆ, ಹುಮಾಯೂನ್‌ ಖಾನ್, ಮಹಾನಗರ ಪಾಲಿಕೆ ಸದಸ್ಯರು, ಮೇಯರ್, ಉಪಮೆಯರ್,  ಸೇರಿದಂತೆ ಇತರರಿದ್ದರು. ರಾಹುಲ್ ಗಾಂಧಿ ಅವರು ಮಾತನಾಡುವ ವೇಳೆ ಜಿಟಿ ಜಿಟಿ ಹನಿ ಸುರಿಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!