Wednesday, June 7, 2023

Latest Posts

ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಲಕ್ನೋ: ಪಂಜಾಬ್‌ ಬೌಲರ್‌ಗಳ ಬೆವರಿಳಿಸಿದ ಬ್ಯಾಟ್ಸ್‌ಮನ್‌ಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಬ್ಯಾಟ್ಸ್‌ಮನ್‌ಗಳು ಇಂದು ಅಬ್ಬರದ ಬ್ಯಾಟಿಂಗ್ ನಡೆಸಿದ್ದು, ಪಂಜಾಬ್‌ ಕಿಂಗ್ಸ್‌ ತಂಡದ ಬೌಲರ್‌ಗಳನ್ನು ಅಕ್ಷರಶಃ ಚೆಂಡಾಡಿದರು.

ಕೈಲ್‌ ಮೇಯರ್ಸ್‌ 54, ಮಾರ್ಕ್‌ ಸ್ಟೋಯಿನಸ್‌ 72 ಹಾಗೂ ನಿಕೋಲಸ್‌ ಪೂರನ್‌ 45 ರನ್ ಪಂಜಾಬ್‌ ಬೌಲರ್‌ಗಳ ಬೆವರಿಳಿಸಿದ್ದು ಮಾತ್ರವಲ್ಲ ಐಪಿಎಲ್‌ನ ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆಗಳ ನಿರ್ಮಾಣಕ್ಕೆ ಕಾರಣವಾಯಿತು. ಈ ಮೂಲಕ 5 ವಿಕೆಟ್‌ಗೆ 257 ರನ್‌ ಪೇರಿಸಲು ಶಕ್ತವಾಯಿತು. ಇದು ಐಪಿಎಲ್‌ನಲ್ಲಿ ತಂಡವೊಂದರ 2ನೇ ಗರಿಷ್ಠ ಮೊತ್ತವಾಗಿದೆ.

ಕೆಎಲ್‌ ರಾಹುಲ್‌ 9 ಎಸೆತಗಳಲ್ಲಿ 12 ರನ್‌ ಬಾರಿಸಿ ರಬಾಡ ಎಸೆತದಲ್ಲಿ ಔಟಾದರು. ಬಳಿಕ ಆಯುಷ್‌ ಬಡೋನಿಗೆ ಭಡ್ತಿ ನೀಡಿ ಮೂರನೇ ಕ್ರಮಾಂಕದಲ್ಲಿ ಆಡಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ಅದರಲ್ಲಿ ಯಶಸ್ಸು ಕಂಡಿತು.
ಕೈಲ್‌ ಮೇಯರ್ಸ್‌ ಕೇವಲ 20 ಎಸೆತಗಳಲ್ಲಿ 50 ರನ್‌ ಬಾರಿಸಿ ಮೂಲಕ ಅಬ್ಬರಿಸಿದರು. ಮೇಯರ್ಸ್‌ ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್‌, 7 ಬೌಂಡರಿಗಳಿದ್ದ 54 ರನ್‌ ಚಚ್ಚಿದ್ದರು.

ಮೇಯರ್ಸ್‌ ನಿರ್ಗಮನದ ಬಳಿಕ ಕ್ರೀಸ್‌ಗಿಳಿದಿದ್ದ ಸ್ಟೋಯಿನಸ್‌ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!