Tuesday, May 30, 2023

Latest Posts

ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ: ಶಾಸಕ ಯತ್ನಾಳ

ಹೊಸದಿಗಂತ ವರದಿ ವಿಜಯಪುರ:

ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಸದ್ಯ ಅದು ಡೌನ್ ಆಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರ್ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ಏರಿಕೆ‌‌ ಕಂಡಿತ್ತು. ಈಗ ಮತ್ತೆ ಡೌನ್ ಆಗಿದೆ, ಅಧಿಕಾರಕ್ಕೆ ಬರೋದಿಲ್ಲ ಎಂದರು.

ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋದರೆ ಅದು ಮರಣ ಶಾಸನ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವವರಿಗೆ ಎಚ್ಚರಿಕೆ ನೀಡುತ್ತ, ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬಿದ್ದಂತೆ ಎಂದು ಹೇಳಿದರು.

ಬಿಜೆಪಿಯಲ್ಲಿ ಇದ್ದರೆ ಸೇಫ್, ಇಲ್ಲೆ ಇದ್ದು ಗೆದ್ದು ಸಂತಸದಿಂದ ಮಂತ್ರಿಯಾಗೋದು ಒಳ್ಳೆಯದು ಎಂದು ತಿಳಿಸಿದರು.

ಚುನಾವಣೆಯಲ್ಲಿ ಗಿಫ್ಟ್ ಹಂಚೋರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಗಡಿಯಾರ, ಸೀರೆ, ಕುಕ್ಕರ್ ಒಂದು ಮತ ಕಿಮ್ಮತ್ತು ಆಗುತ್ತಾ ?. ನಾನು ಗಿಫ್ಟ್ ಪಾಲಿಟಿಕ್ಸ್‌ಗೆ ವಿರೋಧವಾಗಿದ್ದೀನಿ. ನಾನು ಏನು ಹಂಚೋದಿಲ್ಲ, ಸಾಧನೆ ನೋಡಿ ಓಟ್ ಹಾಕಿ ಅಂತಾ ಹೇಳಿದ್ದೇನೆ ಎಂದರು.

ದೀಪಾವಳಿಯಲ್ಲಿ ಗಿಫ್ಟ್ ನೀಡಿದ್ದೇನೆ. ಆಗ ಎಲ್ಲರು ಕೊರೋನಾದಿಂದ ಸಂಕಷ್ಟದಲ್ಲಿದ್ದರು. ಈಗ ಕೆಲ ಮಂದಿ ಸಕ್ಕರೆ ಹಂಚುತ್ತಿದ್ದಾರೆ. ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!