ಅವಧಿ ಮುಗಿದ ಬಳಿಕ ಕಾಂಗ್ರೆಸ್ ನಿಂದ ಮಹಾದಾಯಿ-ಕಳಸಾ ಬಂಡೂರಿ ಯೋಜನೆ ಕುರಿತು ಮಾತು: ಕೇಂದ್ರ ಸಚಿವ ಜೋಶಿ

ಹೊಸದಿಗಂತ ವರದಿ,ಹುಬ್ಬಳ್ಳಿ:

ಮಹಾದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ವಿಸ್ತೃತ ಯೋಜನಾ ವರದಿಯನ್ನು(ಡಿಪಿಆರ್)ಕೇಂದ್ರ ಜಲ ಆಯೋಗ ದಿನಾಂಕ ನಿಗದಿಪಡಿಸಿಯೇ ಅನುಮತಿ ನೀಡಿದೆ. ಆದರೆ ಕಾಂಗ್ರೆಸ್‌ನವರು ದಿನಾಂಕದ ಬಗ್ಗೆ ಹೆಚ್ಚು ತಲೆಕಡಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ಅವರ ದಿನಾಂಕದ ಅವಧಿ ಮುಗಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು.

ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಈ ಕುರಿತು ಪತ್ರ ಬರೆದಿದ್ದು, ಅದರಲ್ಲಿ ದಿನಾಂಕವಿರುವುದು ಜಗಜಾಹಿರಾಗಿದೆ. ಆದರೆ ಕಾಂಗ್ರೆಸ್ ನವರಿಗೆ ದಿನಾಂಕವಿರುವುದನ್ನು ಸರಿಯಾಗಿ ನೋಡಿಲ್ಲ. ಮಾಜಿ ಸಚಿವ ಎಚ್.ಕೆ. ಪಾಟೀಲ ರಾಜಕೀಯ ಲಾಭಕ್ಕಾಗಿ, ಇಲ್ಲವೇ ಮೂರ್ಖತನದಿಂದ ಈ ರೀತಿ ಹೇಳಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಡಿ. ೨೯ ಕ್ಕೆ ಡಿಪಿಆರ್‌ಗೆ ಅನುಮೋದನೆ ಸಿಕ್ಕಿದೆ ಎಂದರು.

ಕಾಂಗ್ರೆಸ್ ಆಡಳಿತ ಅವಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಒಂದು ಹನಿ ನೀರು ನೀಡಲ್ಲ ಎಂದಿದ್ದರು. ಬಳಿಕ ಬಿಜೆಪಿ ನಿಯೋಗ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ ಮಹಾದಾಯಿ ಯೋಜನೆಯನ್ನು ನ್ಯಾಯಾಕರಣಕ್ಕೆ ಕೊಡುವ ಬದಲು ೭.೫ ಅಥವಾ ೩.೫ ಟಿಎಂಸಿ ನೀರಿಗೆ ಅನುಮತಿ ನೀಡಲು ಮನವಿ ಮಾಡಿದ್ದೆವು. ಅಷ್ಟೇ ಅಲ್ಲದೆ ನ್ಯಾಯಾಕರಣ ಆದೇಶದ ಬಳಿಕ ಗೆಜೆಟ್ ಸಹ ಮಾಡಿಸಲಾಯಿತ್ತು ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಷ್ಟು ವರ್ಷ ಬಿಟ್ಟು ಈಗೇಕೆ ಡಿಪಿಆರ್ ಅನುಮತಿ ತಂದರು ಎಂಬ ಪ್ರಶ್ನಿಸುವ ಅವರು, ಕಳೆದ ೫೫ ವರ್ಷಗಳಿಂದ ಕೇಂದ್ರದಿಂದ ಹಿಡಿದು ಜಿಲ್ಲಾ ಪಂಚಾಯತಿ ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದರು ಏಕೆ ಈ ಕಾರ್ಯ ಮಾಡಲಿಲ್ಲ. ನೈರುತ್ಯ ರೈಲ್ವೆ ವಲಯದಲ್ಲಿ ಇಬ್ಬಗೆಯ ನೀತಿ ಅನುಸರಿದರು. ಅದೇ ರೀತಿ ಕಳಸಾ ಬಂಡೂರಿ ವಿಚಾರದಲ್ಲಿ ಮಾಡಿದರು ಎಂದರು.

ಬಿಜೆಪಿ ಸುಳ್ಳಿನ ಎಟಿಎಂ ಎನ್ನುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರದು ಯಾವ ಎಟಿಎಂ? ಅವರು ವಚನ ಭ್ರಷ್ಟರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರ ಕುಟುಂಬ ಸಮಾಜ, ದೇಶಕ್ಕಾಗಿ ತ್ಯಾಗ ಮಾಡುವವರಲ್ಲ. ಪರಸ್ಪರ ಒಬ್ಬರಿಗೊಬ್ಬರ ಅವರ ಇಡೀ ಕುಟುಂಬದ ಬೆಳವಣಿಗೆಯದೇ ಚಿಂತೆ. ಪಂಚ ರತ್ನ ಯಾತ್ರೆಯಲ್ಲಿಯೂ ಅವರ ಕುಟುಂಬದವರಿದ್ದಾರೆ. ದೇವಗೌಡರು ಅವರ ಮರಿ ಮೊಮ್ಮಗನಿಗೆ ರಾಜಕೀಯ ಬುದ್ಧಿ ಬಂದರೆ ಅವನನ್ನು ರಾಜಕೀಯಕ್ಕೆ ಕರೆತರುತ್ತಾರೆ. ಅಂದೊಂದು ಕುಟುಂಬ ಪ್ರೇರಿತ ಭ್ರಷ್ಟಾ ಪಕ್ಷ ಅಂತವರಿಗೆ ಏನು ಪ್ರತಿಕ್ರಿಯಿಸಬೇಕು ಎಂದು ಹರಿಹಾಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!