Wednesday, July 6, 2022

Latest Posts

ನಿಲ್ಲದ ಕಾಂಗ್ರೆಸ್ಸಿಗರ ಪ್ರತಿಭಟನೆ : ಇಡಿ ಕಛೇರಿಯೆದುರು ಟೈರ್‌ ಸುಟ್ಟ ಪ್ರತಿಭಟನಾಕಾರರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ವಿಚಾರಣೆ ಜಾರಿಯಲ್ಲಿದೆ. ಇಂದು ಮೂರನೇ ದಿನವೂ ರಾಗಾ ವಿಚಾರಣೆಯನ್ನು ಜಾರಿ ನಿರ್ದೇಶನಾಲಯವು ನಡೆಸುತ್ತಿದೆ. ಇವುಗಳ ಮಧ್ಯೆ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ ಮುಂದುವರೆದಿದೆ.

ರಾಹುಲ್‌ ಗಾಂಧಿಯವರ ವಿಚಾರಣೆಯನ್ನು ವಿರೋಧಿಸಿ ಇಂದೂ ಕೂಡ ಕಾಂಗ್ರೆಸ್‌ ಪ್ರತಿಭಟನೆ ಮುಂದುವರೆದಿದ್ದು ಹಲವು ವರಿಷ್ಠ ನಾಯಕರು ಸೇರಿದಂತೆ ನೂರಾರು ಕಾರ್ಯಕರ್ತರು, ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ʼರಾಹುಲ್‌ ಗಾಂಧಿ ಜಿಂದಾಬಾದ್‌ʼ ಎಂದು ಕೂಗುತ್ತಿರುವ ಅವರು ʼಐಯ್ಯಾಮ್‌ ರಾಹುಲ್‌ ಗಾಂಧಿ ಟೂʼ (ನಾನೂ ಕೂಡ ರಾಹುಲ್‌ ಗಾಂಧಿ) ಎಂಬ ಬೋರ್ಡ್‌ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ. ಬಿಜೆಪಿ ಅಧಿಕಾರದ ದುರಪಯೋಗ ಮಾಡಿ ಸುಳ್ಳು ಪ್ರಕರಣ ಸೃಷ್ಟಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಒಳಗಡೆ ರಾಹುಲ್ ಗಾಂಧಿಗೆ ಇಡಿ ಡ್ರಿಲ್‌ ನಡೆಯುತ್ತಿದ್ದರೆ ಕಛೇರಿಯ ಹೊರಗಡೆ ಪ್ರತಿಭಟನಾಕಾರರು ಟೈರ್‌ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ ಕೇಂದ್ರ ಕಛೇರಿಗೆ ಪೋಲೀಸರ ಎಂಟ್ರಿ ಕುರಿತು ಕಾಂಗ್ರೆಸ್‌ ಮುಖಂಡರಾದ ಕೆಸಿ ವೇಣುಗೋಪಾಲ್, ಭೂಪೇಶ್ ಬಾಘೇಲ್, ರಣದೀಪ್ ಸುರ್ಜೆವಾಲಾ ಮತ್ತು ಅಧೀರ್ ರಂಜನ್ ಚೌಧರಿ ಸೇರಿದಂತೆ ಮುಂತಾದ ನಾಯಕರ ಸಭೆ ನಡೆಯುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss