ಹೊಸದಿಗಂತ ಡಿಜಟಲ್ ಡೆಸ್ಕ್:
ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪಕ್ಷದ ನಾಯಕ ರಾಹುಲ್ ಗಾಂಧಿ ಬೆಳಗ್ಗೆ ವೆಲ್ಲಯಾಣಿ ಜಂಕ್ಷನ್‌ನಿಂದ ಪಾದಯಾತ್ರೆ ಆರಂಭಿಸಿದ್ದಾರೆ.
ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ. ಯಾತ್ರೆ ನೋಡಲು ರಸ್ತೆಬದಿಗಳಲ್ಲಿ ಜನರು ನಿಂತಿದ್ದಾರೆ. ಕೇರಳ ಜನತೆ ಒಗ್ಗಟ್ಟು ಹಾಗೂ ಸೌಹಾರ್ದತೆಗೆ ಹೆಸರುವಾಸಿ, ಇದನ್ನು ಇಡೀ ದೇಶಕ್ಕೇ ಸಾರಿದ್ದಾರೆ. ಕೇರಳ ಎಲ್ಲರನ್ನೂ ಗೌರವಿಸುತ್ತದೆ ಹಾಗೂ ದೇಶ ವಿಭಜನೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ರಾಗಾ ಹೇಳಿದ್ದಾರೆ.