ಎಸಿ ರೂಂನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದೀರಾ? ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಬ್ಬಬ್ಬಾ ಈ ಬಿಸಿಲಿನ ಬೇಗೆ ತಡೆಯಲಾಗುತ್ತಿಲ್ಲ ಅಂತ ಸಾಮಾನ್ಯವಾಗಿ ಅನೇಕರು ತಂಪು ಕೂಲ್‌ ಕೂಲಾಗಿರಲು ಎಸಿ, ಫ್ಯಾನ್‌, ಫ್ರಿಡ್ಜ್‌ಗಳ ಮೊರೆ ಹೋಗುವುದು ಹೊಸದೇನಲ್ಲ. ಈಗಂತೂ ಹಳ್ಳಿಗಳಲ್ಲೂ ಈ ಯಂತ್ರಗಳ ಹಾವಳಿ ಜೋರಾಗಿಯೇ ಇದೆ. ಮನೆಗಳು, ಕಚೇರಿಗಳು ಮತ್ತು ವಾಹನಗಳಲ್ಲಿ ಎಸಿಗಳನ್ನು ಅಳವಡಿಸಲಾಗುತ್ತಿದೆ. ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರು ತಮ್ಮ ಎಲ್ಲಾ ಕೆಲಸದ ಸಮಯವನ್ನು ಎಸಿ ರೂಂಗಳಲ್ಲಿಯೇ ಕಳೆಯಬೇಕಾಗಿದೆ. ಎಸಿಯಲ್ಲಿ ಹೆಚ್ಚು ಹೊತ್ತು ಇರುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಚ್ಚರವಿರಲಿ.

ಹವಾನಿಯಂತ್ರಣದಿಂದ ಶೀತವು ಚರ್ಮವನ್ನು ಹಾನಿಗೊಳಿಸುತ್ತದೆ. ಸದಾ ಎಸಿಯಲ್ಲಿ ಇರುವವರ ಚರ್ಮ ಸುಕ್ಕುಗಟ್ಟುತ್ತದೆ ಮತ್ತು ತೇವಾಂಶ ಕಳೆದುಕೊಂಡು ಕಣ್ಣುಗಳಿಗೆ ಹಾನಿಯಾಗುತ್ತದೆ. ಸೋಂಕು ಮತ್ತು ಅಲರ್ಜಿಯಂತಹ ಸಮಸ್ಯೆಗಳೂ ಕೂಡ ಶುರುವಾಗುತ್ತವೆ.

ಇದರ ಜೊತೆಗೆ ತಲೆನೋವು, ಮೈಗ್ರೇನ್ ನಿರ್ಜಲೀಕರಣದಂತಹ ಸಮಸ್ಯೆಗಳು ಕಾಡುತ್ತವೆ.  ಉಸಿರಾಟದ ತೊಂದರೆ ಇರುವವರು ಎಸಿ ಕೊಠಡಿಗಳಲ್ಲಿ ಹೆಚ್ಚು ಸಮಯ ಕಳೆಯುವುದು ಸೂಕ್ತವಲ್ಲ.

ಎಸಿ ಮೂಗಿನ ಲೋಳೆಪೊರೆಯು ಊತಕ್ಕೆ ಒಳಗಾಗುವಂತೆ ಮಾಡುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು, ಕಣ್ಣಿನ ಕಾಯಿಲೆ ಇರುವವರು, ಅಸ್ತಮಾ ರೋಗಿಗಳು ಎಸಿಯಿಂದ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಎಸಿಯಲ್ಲಿ ದೀರ್ಘಕಾಲ ಉಳಿಯುವುದು ಹಠಾತ್ ಶೀತ ಮತ್ತು ಮೂಗು ಸೋರುವಿಕೆಗೆ ಕಾರಣವಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!