ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಅಭೂತಪೂರ್ವ ಗೆಲುವು ಸಾಧಿಸಿದ್ದು, ಇತ್ತ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ.
ಇನ್ನು ತಮ್ಮ ಸೋಲಿನ ಕುರಿತು ಮಾತನಾಡಿದ ಪಂಜಾಬ್ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಪಂಜಾಬಿನ ಜನತೆ ಬದಲಾವಣೆ ಬಯಸಿದ್ದು, ಹಾಗಾಗಿ ಮಹತ್ವದ ನಿರ್ಧಾರವನ್ನೇ ಕೈಗೊಂಡಿದ್ದಾರೆ ಎಂದರು.
ನೀವು ಏನು ಬಿತ್ತಿದ್ದೀರೋ ಅದನ್ನೇ ಪಡೆಯುತ್ತೀರಿ. ಹಾಗಾಗಿ, ಈ ಚುನಾವಣೆ ಬದಲಾವಣೆಗಾಗಿ ನಡೆದಿದೆ. ಇಲ್ಲಿ ಮತದಾರರು ತಪ್ಪು ಮಾಡುವುದಿಲ್ಲ. ಸರಿಯಾಗಿ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದರು.
ಚುನಾವಣೆಯಲ್ಲಿ ಸಿದ್ದುಗಾಗಿ ಗುಂಡಿ ತೋಡಿದವರು 10 ಅಡಿ ಆಳದ ಗುಂಡಿಗಳಲ್ಲಿ ಬಿದ್ದು ಹೋಗಿದ್ದಾರೆ. ಗೆದ್ದ ಅಪ್ ಗೆ ನಾನು ಅವರನ್ನು ಅಭಿನಂದಿಸುತ್ತೇನೆ. ನಾವು ಹೊಸ ಬೀಜಗಳನ್ನು ಬಿತ್ತಬೇಕಿದೆ ಎಂದು ಸಿಧು ಅಭಿಪ್ರಾಯಪಟ್ಟರು.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅಮೃತಸರ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವಜೋತ್ ಸಿಂಗ್ ಸಿಧು ಕೂಡ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.