ಪಾಕ್‌ ಯುವತಿಯನ್ನು ಮದುವೆಯಾದ ದಿನವೇ ಬಾಂಬ್‌ ಸ್ಫೋಟದಲ್ಲಿ ಸಾವನ್ನಪ್ಪಿದ ಕೇರಳ ಮೂಲದ ಉಗ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಕೇರಳ ಮೂಲದ ಉಗ್ರನೊಬ್ಬ ಪಾಕಿಸ್ತಾನಿ ಯುವತಿಯನ್ನು ಮದುವೆಯಾದ ಕೆಲವೇ ಗಂಟೆಯಲ್ಲಿ ಬಾಂಬ್‌ ಸ್ಫೋಟಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.
ಜಾಗತಿಕ ಭಯೋತ್ಪಾದಕ ಸಂಘಟನೆ ಐಎಸ್‌ಐಎಸ್‌ನ ಅಫ್ಘಾನ್‌ ಶಾಖೆಯಾದ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾವಿನೆನ್ಸ್ (ಐಎಸ್‌ಕೆಪಿ) ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇರಳದ ನಜೀಬ್ ಅಲ್ ಹಿಂದಿ ಎಂಬಾತ ಮೃತಪಟ್ಟ ಉಗ್ರ. ಕೇರಳದಲ್ಲಿ ಈಂಜಿನಿಯರಿಂಗ್‌ ಪಡವಿ (ಎಂ.ಟೆಕ್‌) ಪದವಿ ಪೂರ್ಣಗೊಳಿಸಿದ್ದ 24 ವರ್ಷದ ನಜೀಬ್‌ ಬಳಿಕ ಅಫ್ಘಾನಿಸ್ತಾನಕ್ಕೆ ತೆರಳಿ ಅಲ್ಲಿನ ಉಗ್ರಗಾಮಿ ಸಂಘಟನೆ ಸೇರಿದ್ದ.
ನಜೀಬ್‌ ವಿವಾಹ ಪಾಕ್‌ ಯುವತಿಯೊಂದಿಗೆ ನಿಶ್ಚಯವಾಗಿತ್ತು. ಆ ಯುವತಿಯ ಕುಟುಂಬಸ್ಥರು ಐಎಸ್ಕೆಪಿ ಸಂಘಟನೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದರು. ನಜೀಬ್‌ ಆ ಯುವತಿಯನ್ನು ವಿವಾಹವಾದ ದಿನವೇ ಶತ್ರುಗಳಿಂದ ಅವರಿದ್ದ ಪ್ರದೇಶದ ಮೇಲೆ ದಾಳಿ ನಡೆದಿದೆ. ನಜೀಬ್‌ ಉಗ್ರಸಂಘನೆಯಲ್ಲಿ ಆತ್ಮಹತ್ಯಾ ದಾಳಿಗೆ ಸಿದ್ಧನಾಗಿದ್ದ. ಆದರೆ, ಯುವತಿಯ ತಂದೆಯ ಒತ್ತಾಯದ ಮೇರೆಗೆ ವಿವಾಹವಾದ. ಆತ ಹುತಾತ್ಮನಾಗುವುದರ ಬಗ್ಗೆಯೇ ಯಾವಗಲೂ ಯೋಚಿಸುತ್ತಿದ್ದ ಎಂದು ಎಂದು ಇತ್ತೀಚೆಗೆ ಬಿಡುಗಡೆಯಾದ ಉಗ್ರಗಾಮಿ ಸಂಘಟನೆಯ ನಿಯತಕಾಲಿಕೆ ವಾಯ್ಸ್ ಆಫ್ ಖೊರಾಸನ್ನಲ್ಲಿ ಮಾಹಿತಿ ನೀಡಲಾಗಿದೆ.
ಅದಾಗ್ಯೂ ಯಾವಾಗ ಬಾಂಬ್‌ ದಾಳಿ ನಡೆದಿದೆ, ದಾಳಿಯ ಕಾರಣ, ಸಮಯ ಮೊದಲಾದ ವಿವರಗಳ ಮಾಹಿತಿ ನೀಡಿಲ್ಲ. ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅದರೊಂದಿಗೆ ಹಲವು ಬಾರಿ ಹೋರಾಡಿದೆ. ಅನೇಕ ಆತ್ಮಹತ್ಯಾ ದಾಳಿಗಳನ್ನೂ ಸಂಘಟನೆ ನಡೆಸಿದ್ದು, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!