ಮಸ್ಕ್‌ ವಿರುದ್ಧ ಪಿತೂರಿ ನಡೆಸಿದ್ರಾ ಬಿಲಿಗೇಟ್ಸ್..? ಹೀಗಂದಿದ್ಯಾಕೆ ಮಸ್ಕ್..?‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಸ್ಕ್‌ ಟ್ವಿಟರ್‌ ಖರೀದಿಯ ವಿರುದ್ಧ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲಿಯನೇರ್‌ ಬಿಲಿಗೇಟ್ಸ್‌ ಪಿತೂರಿ ನಡೆಸದಿದ್ದಾರೆ ಎಂದು ಎಲಾನ್‌ ಮಸ್ಕ್‌ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಮಸ್ಕ್‌ ಟ್ವೀಟರ್‌ ಖರೀದಿಯನ್ನು ವಿರೋಧಿಸಲು ಬಿಲಿಗೇಟ್ಸ್‌ ಫೌಂಡೇಷನ್‌ ನಿಂದ ಸುಮಾರು 11 ಸಂಸ್ಥೆಗಳಿಗೆ ಮಿಲಿಯನ್‌ ಗಟ್ಟಲೇ ಹಣ ಸಂದಾಯವಾಗಿದೆ. ಅಲ್ಲದೇ ಮಸ್ಕ್‌ ಟ್ವೀಟರ್‌ನಲ್ಲಿ ವಾಕ್‌ ಸ್ವಾತಂತ್ರ್ಯವನ್ನು ಮರು ಸ್ಥಾಪಿಸಿದರೆ ಕಂಪನಿಯನ್ನು ಬಹಿಷ್ಕರಿಸುವಂತೆ ಟ್ವಿಟರ್ ಜಾಹೀರಾತುದಾರರನ್ನು ಒತ್ತಾಯಿಸಿ ಬಿಲಿಗೇಟ್ಸ್ ಕಳೆದ ತಿಂಗಳು ಮುಕ್ತ ಪತ್ರವೊಂದಕ್ಕೆ ಸಹಿ ಹಾಕಿದ್ದರು ಎಂದು ಬ್ರೀಟ್‌ಬಾರ್ಟ್ ನ್ಯೂಸ್ ವರದಿ ಮಾಡಿದೆ.

ಈ ಕುರಿತು ಫೌಂಡೇಶನ್ ಫಾರ್ ಫ್ರೀಡಮ್ ಆನ್‌ಲೈನ್ (FFO) ವರದಿಯು ಹಲವಾರು ಸಾರ್ವಜನಿಕ ಫೈಲಿಂಗ್‌ಗಳನ್ನು ಸಂಶೋಧಿಸಿದ್ದು 26 ಮಸ್ಕ್‌ ವಿರೋಧಿ ಸಂಸ್ಥೆಗಳಲ್ಲಿ 11 ಸಂಸ್ಥೆಗಳು ಬಿಲಿಗೇಟ್ಸ್‌ ರಿಂದ ಹಣ ಪಡೆದಿವೆ ಎಂದಿದೆ. ಈ ವಿಶ್ಲೇಷಣೆಯ ಪ್ರಕಾರ 102 ಪ್ರತ್ಯೇಕ ನಗದು ಅನುದಾನಗಳ ಮೂಲಕ 457 ಮಿಲಿಯನ್ ಡಾಲರ್‌ ಹಣವನ್ನು ಸುರಿಯಲಾಗಿದೆ.

ಇದರಿಂದ ಕುಪಿತಗೊಂಡ ಮಸ್ಕ್‌ ಗೇಟ್ಸ್‌ ವಿರುದ್ಧ ಹರಿಹಾಯ್ದಿದ್ದಾರೆ. “ಎಂಥ ನೀಚ ಕೆಲಸ” ಎಂದು ಟ್ವಿಟ್‌ ಮೂಲಕ ಜರಿದಿದ್ದಾರೆ.

ಈ ಹಿಂದೆ ಕಂಟೆಂಟ್ ಮಾಡರೇಷನ್ ಬದಲಾವಣೆ ಮಾಡದಂತೆ‌ 26 ಸಂಸ್ಥೆಗಳು ಟ್ವೀಟರ್‌ ಗೆ ಪತ್ರ ಬರೆದಿದ್ದವು. ಹಾಗೂ “ಟ್ವೀಟರ್‌ ಮೇಲೆ ಎಲೋನ್ ಮಸ್ಕ್ ಅವರ ಸ್ವಾಧೀನವು ನಮ್ಮ ಮಾಹಿತಿ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ವಿಷಪೂರಿತಗೊಳಿಸುತ್ತದೆ ಮತ್ತು ಸಾರ್ವಜನಿಕ ಸುರಕ್ಷತೆಗೆ ನೇರ ಬೆದರಿಕೆಯಾಗಿದೆ” ಎಂದು ಜಾಹಿರಾತುದಾರರಿಗೆ ಪತ್ರ ಬರೆದಿದ್ದವು.

ಈ ಹಿಂದೆಯೂ ಕೂಡ ಮಸ್ಕ್‌ ಹಾಗೂ ಬಿಲ್‌ ಗೇಟ್ಸ್‌ ನಡುವೆ ಬೇರೆ ಬೇರೆ ವಿಷಯಗಳಿಗೆ ಟ್ವೀಟರ್‌ ವಾರ್‌ ನಡೆದಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!