ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ 1008 ಯಜ್ಞ ಮಂಟಪ ನಿರ್ಮಾಣ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠೆ ನಡೆಯುವ ಮೊದಲು ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ 1008 ಶಿವಲಿಂಗಗಳನ್ನು ಸ್ಥಾಪಿಸುವ ಭವ್ಯವಾದ ರಾಮನಾಮ ಮಹಾಯಜ್ಞ ಜನವರಿ 14 ರಿಂದ ಜನವರಿ 25 ರವರೆಗೆ ನಡೆಯಲಿದೆ.

ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ನೇಪಾಳದಿಂದ 21,000 ಯತಿಗಳು ಆಗಮಿಸಲಿದ್ದಾರೆ. ಮಹಾಯಾಗವನ್ನು ನಡೆಸಿ, ಅದರಲ್ಲಿ ಶಿವಲಿಂಗಗಳನ್ನು ಇರಿಸಲು ಈಗಾಗಲೇ 1008 ಯಜ್ಞ ಮಂಟಪವನ್ನು ನಿರ್ಮಿಸಲಾಗಿದೆ. ಈ ಪೈಕಿ ದೊಡ್ಡ ಯಾಗ ಶಾಲೆಯ ಛಾವಣಿ 11 ಪದರಗಳನ್ನು ಹೊಂದಿರುವುದು ವಿಶೇಷ.

ರಾಮ ಮಂದಿರದಿಂದ 2 ಕಿ.ಮೀ ದೂರದಲ್ಲಿರುವ ಸರಯೂ ನದಿಯ ಮರಳು ಘಾಟ್‌ನಲ್ಲಿರುವ 100 ಎಕರೆ ಪ್ರದೇಶದಲ್ಲಿ ಈ ಯಜ್ಞ ಮಂಟಪಗಳನ್ನು ಸ್ಥಾಪಿಸಲಾಗಿದೆ.

ಅಯೋಧ್ಯೆ ಮೂಲದ ಈಗ ನೇಪಾಳದಲ್ಲಿ ನೆಲೆಸಿರುವ ಆತ್ಮಾನಂದ ದಾಸ್ ಮಹಾತ್ಯಾಗಿ ಅವರು ಈ ಯಾಗವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷದ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನಾನು ಈ ಯಾಗವನ್ನು ಮಾಡುತ್ತೇನೆ. ಆದರೆ ಈ ವರ್ಷ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಯಜ್ಞ ಮಂಟಪಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!