‘ಎಕ್ಸ್‌’ ಸೇಫ್ಟಿ ಟೀಮ್‌ನ 1 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ ಮಸ್ಕ್

ಹೊಸದಿಗಂತ ಡಿಜಿಟಲ್ ಡೆಸ್:

ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್‌ನಿಂದ ಒಂದು ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ.

ದ್ವೇಷ ಬೆಳೆಸುವ ಹಾಗೂ ನಿಂದನೀಯ ಭಾಷೆಯ ವಿಷಯಗಳನ್ನು ಗಮನಿಸುತ್ತಿದ್ದ ಸೇಫ್ಟಿ ಟೀಂನಿಂದ ಒಂದು ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿರುವುದಾಗಿ ವರದಿಯಾಗಿದೆ.

ಈ ಬಗ್ಗೆ ಆಸ್ಟ್ರೇಲಿಯಾದ ಆನ್‌ಲೈನ್ ವಾಚ್‌ಡಾಗ್ ಇ-ಸೇಫ್ಟಿ ಕಮಿಷನ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಮಸ್ಕ್ ಟ್ವಿಟರ್ ಸ್ವಾಧೀನಪಡಿಸಿಕೊಂಡ ನಂತರ ಒಂದು ಸಾವಿರ ಉದ್ಯೋಗಿಗಳನ್ನು ಸೇಫ್ಟಿ ಟೀಂನಿಂದ ಹೊರತೆಗೆಯಲಾಗಿದೆ, ಇದರಿಂದಾಗಿ ದ್ವೇಷಪೂರಿತ ವಿಷಯಗಳು ಟ್ವಿಟರ್‌ನಲ್ಲಿ ಹೆಚ್ಚಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!