ಕಾರಡಗಿಯಲ್ಲಿ 30 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ಹಾವೇರಿ:

ಕಾರಡಗಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು ೮ ಕೋಟಿ ರೂ. ವೆಚ್ಚದಲ್ಲಿ ೩೦ ಹಾಸಿಗೆ ಆಸ್ಪತ್ರೆ, ಓಟಿ ಸೇರಿದಂತೆ ಹಲವು ಸೌಕರ್ಯಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಶನಿವಾರ ಜಿಲ್ಲೆಯ ಸವಣೂರು ತಾಲ್ಲೂಕಿನ ಕಾರಡಗಿ ಶ್ರೀ ವೀರಭದ್ರೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಯಾತ್ರಿನಿವಾಸ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಾರಡಗಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಶಿಗ್ಗಾಂವಿ ಹುಲಗೂರು ಮತ್ತು ಸವಣೂರಿನಲ್ಲಿ ಕಾರಡಗಿ ಪಿಹೆಚ್‌ಸಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಕಾರಡಗಿ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ವಾಲ್ಮೀಕಿ ಭವನ, ರಸ್ತೆ, ಅಂಗನವಾಡಿ, ಶಾಲೆ, ಸಭಾ ಭವನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
ಕಾರಡಗಿ ಶ್ರೀ ಕ್ಷೇತ್ರ ಈ ಭಾಗದ ಪವಿತ್ರ ಕ್ಷೇತ್ರವಾಗಿದ್ದು, ಶಕ್ತಿಯ ಕೇಂದ್ರವಾಗಿದೆ. ಸುತ್ತಮುತ್ತಲಿನ ತಾಲ್ಲೂಕುಗಳ ಜೊತೆಗೆ ಬೆಳಗಾವಿ, ದಾವಣಗೆರೆ, ಶಿವಮೊಗ್ಗದಲ್ಲಿ ಈ ಕ್ಷೇತ್ರಕ್ಕೆ ಭಕ್ತಾದಿಗಳು ಆಗಮಿಸುತ್ತಾರೆ. ವೀರಭದ್ರೇಶ್ವರ ಹಾಗೂ ಈಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಉತ್ತಮ ರೀತಿಯಲ್ಲಿ ಆಗಿದೆ. ಇಲ್ಲಿ ನಾನು ಶಾಸಕನಾಗಿದ್ದಾಗ ಪ್ರಸಾದ ನಿಲಯವನ್ನು ನಿರ್ಮಿಸಿದ್ದೇನೆ. ಈಗ ೪ ಡಾರ್ಮೆಟ್ರಿ ಮತ್ತು ಕೊಠಡಿಗಳಿರುವ ಯಾತ್ರಿನಿವಾಸವನ್ನು ೧.೫೦ ಕೋಟಿರೂ. ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ. ಹೆಚ್ಚುವರಿಯಾಗಿ ೧.೫೦ ಕೋಟಿರೂ. ಮಂಜೂರು ಮಾಡಿ, ಶ್ರೀಕ್ಷೇತ್ರದಲ್ಲಿ ಸುಸಜ್ಜಿತವಾದ ಯಾತ್ರಿನಿವಾಸ ಒಟ್ಟು ೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇಲ್ಲಿನ ಮೂಲಭೂತ ಸೌಕರ್ಯಗಳಿಗೆ ೫೦ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕ್ಷೇತ್ರದಲ್ಲಿ ಸಭಾ ಭವನದ ನಿರ್ಮಾಣಕ್ಕೆ ೧ ಕೋಟಿ ರೂ. ಮಂಜೂರು ಮಾಡಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ಧಿ ಇಲ್ಲಿನ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಸರ್ಕಾರ ಈ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರಗಡಿಯಲ್ಲಿ ೮೩೪ ಮನೆಗಳನ್ನು ಮಂಜೂರಾಗಿದ್ದು, ಹೊಸದಾಗಿ ೨೦೦ ಮನೆಗಳನ್ನು ಮಂಜೂರು ಮಾಡಲಾಗಿದೆ. ಎಂದು ತಿಳಿಸಿದರು.
ಇಲ್ಲಿಗೆ ಬರುವವರಿಗೆ ದಾಸೋಹ ದೊಡ್ಡ ಮಟ್ಟದಲ್ಲಿ ಆಗಬೇಕು. ದಾಸೋಹ ಸಮಿತಿಗೆ ಭಕ್ತರಿಂದಲೇ ದೇಣಿಗೆ ಸಂಗ್ರಹ ಮಾಡಿ, ಇಲ್ಲಿಗೆ ಬರುವ ಭಕ್ತರಿಗೆ ಪ್ರತಿದಿನ ಪ್ರಸಾದ ನೀಡುವ ವ್ಯವಸ್ಥೆಯನ್ನು ಮಾಡಬೇಕು. ಕಾರಡಗಿ ಮತ್ತು ನನಗೆ ಅನ್ಯೋನ್ಯ ಸಂಬಂಧ. ಕಾರಡಗಿ ದೇವರ ದೊಡ್ಡ ಆಶೀರ್ವಾದ ನನ್ನ ಮೇಲಿದೆ. ಕಾರಡಗಿ ಈರಣ್ಣನ ದುಡ್ಡನ್ನು ದುರ್ಬಳಕೆ ಮಾಡಬಾರದು. ಭಕ್ತಿಪೂರ್ವಕವಾಗಿ, ಪ್ರಾಮಾಣಿಕವಾಗಿ ದೇವರ ಸೇವೆ ಮಾಡಬೇಕು. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯಂತ ನಿ?ಯಿಂದ ಆಗಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!