ನಿಮಗಿದು ಅವಕಾಶ: ಆಯುಷ್ಮಾನ್ ಭಾರತ್ ಆರೋಗ್ಯ ಮಿಷನ್’ಗಾಗಿ ಲೋಗೋ ವಿನ್ಯಾಸಗೊಳಿಸಿ ಬಹುಮಾನ ಗೆಲ್ಲಿ ಎಂದ ಕೇಂದ್ರ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೇಂದ್ರ ಸರಕಾರ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್‌ ಗಾಗಿ ಲೋಗೋವನ್ನು ವಿನ್ಯಾಸಗೊಳಿಸಲು ಜನರಿಗೆ ಅವಕಾಶ ನೀಡಿದೆ.

ಲೋಗೋ ಸಲ್ಲಿಕೆಗೆ ಕೊನೆಯ ದಿನಾಂಕ ಜನವರಿ 12 ಆಗಿದೆ.ವಿಜೇತರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಅತಿದೊಡ್ಡ ಪ್ಯಾನ್-ಇಂಡಿಯಾ ಆರೋಗ್ಯ ಯೋಜನೆಗಳಲ್ಲಿ ಒಂದಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಅಕ್ಟೋಬರ್ 25, 2021 ರಂದು ದೇಶದಾದ್ಯಂತ ಸಮಗ್ರವಾದ ಆರೋಗ್ಯ ರಕ್ಷಣೆ ಉದ್ದೇಶದಿಂದ PM-ABHIM ಅನ್ನು ಪ್ರಾರಂಭಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!